ಎನ್‌ಡಿಟಿವಿ ನೀಡಿರುವ ಜೀವಮಾನ ಸಾಧನೆಯ ಪ್ರಶಸ್ತಿ ಗೆದ್ದಿರುವ ಬಿಜೆಪಿ ವರಿಷ್ಠ ಎಲ್.ಕೆ.ಆಡ್ವಾಣಿ ಅವರು ಮುಂಬೈದಾಳಿಯ ಬಳಿಕ ರಾಜಕಾರಣಿಗಳ 'ಇಮೇಜ್'ಗೆ ಧಕ್ಕೆಯುಂಟಾಗಿದೆ ಎಂದು ಹೇಳಿದ್ದಾರೆ." ಇದೀಗ ಈ ಕೊಳಕು ಇಮೇಜನ್ನು ಬದಲಿಸುವುದು ನಮ್ಮ ಕರ್ತವ್ಯ ಮತ್ತು ಈ ಬದಲಾವಣೆಯು ನಮ್ಮದೇ ಗುಣನಡತೆಯಿಂದ ಮಾತ್ರ ಸಾಧ್ಯ" ಎಂದವರು ಹೇಳಿದ್ದಾರೆ." ಮೌಲ್ಯಗಳ ಕುಸಿತವಾದಾಗ, ಸಮಾಜದಲ್ಲಿನ ಗುಣಮಟ್ಟದ ಕುಸಿತವಾದಾಗ ಜನತೆಯ ಕಣ್ಣು ರಾಜಕಾರಣಿಗಳತ್ತ ನೆಟ್ಟಿರುತ್ತದೆ ಎಂದು ಎಲ್ಲವೇಳೆಯೂ ಪ್ರಸಿದ್ಧಿಯಲ್ಲಿರುವ ಸಮುದಾಯಕ್ಕೆ ಸೇರಿದ ನಾನು ಆಗಾಗ ಚಿಂತಿಸುತ್ತಿರುತ್ತೇನೆ. ಕೊಳಕು ಭಾರತೀಯ ರಾಜಕಾರಣಿ ಎಂಬ ಚಿತ್ರಣವನ್ನು ಬದಲಾಯಿಸುವ ಕರ್ತವ್ಯ ನಮ್ಮದೇ ಆಗಿದ್ದು, ಇದು ನಮ್ಮ ಗುಣನಡತೆಯಿಂದ ಮಾತ್ರ ಸಾಧ್ಯ" ಎಂದು ಮಾರ್ಮಿಕವಾಗಿ ಹೇಳಿದ್ದಾರೆ. |