ಉಗ್ರವಾದದ ವಿರುದ್ಧ ಶೂನ್ಯಸಹನೆಗೆ ಗುಜಾರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ." ಉಗ್ರವಾದದ ವಿರುದ್ಧ ವಿವಿಧ ರೀತಿಯ ಹೋರಾಟವಿರಬಹುದು. ಆದರೆ ಉಗ್ರವಾದ ವಿರೋಧಿ ಕಾನೂನುಗಳ ಒಂದೇ ಆಗಿರಬೇಕು" ಎಂದು ಮೋದಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಮೂರು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ನುಡಿದರು.ಯಾವುದೇ ಕಾರಣಕ್ಕೂ ಭಯೋತ್ಪಾದನೆಯನ್ನು ಸಹಿಸಕೂಡದು ಮತ್ತು ಮಾನವ ಹಕ್ಕುಗಳ ಅತಿಯಾದ ಕಾಳಜಿಗಳನ್ನು ನಿರ್ಲಕ್ಷಿಸಬೇಕು ಎಂದು ನುಡಿದ ಗುಜರಾತ್ ಮುಖ್ಯಮಂತ್ರಿ, ಬಾಂಗ್ಲಾದೇಶದ ಅಕ್ರಮ ವಲಸಿಗರ ವಿರುದ್ಧ ಎಬಿವಿಪಿ ಹಮ್ಮಿಕೊಂಡಿರುವ ಚಳುವಳಿಯನ್ನು ಅಭಿನಂದಿಸಿದರು.ಈ ಕುರಿತು ಮಾಧ್ಯಮಗಳು ಬೆಳಕು ಚೆಲ್ಲಿಲ್ಲ ಎಂದು ಖೇದ ವ್ಯಕ್ತಡಿಸಿದ ಅವರು ಇಡಿಯ ರಾಷ್ಟ್ರವು ಇಂತಹ ಅಕ್ರಮ ನುಸುಳುವಿಕೆಯ ಅಪಾಯದ ಕುರಿತು ಎಚ್ಚೆತ್ತುಕೊಳ್ಳುವ ತನಕ ಎಬಿವಿಪಿಯು ತನ್ನ ಹೋರಾಟವನ್ನು ನಿಲ್ಲಿಸಬಾರದು ಎಂದು ಸಲಹೆ ನೀಡಿದರು.ಆರ್ಥಿಕ ಹಿಂಜರಿತವಿದ್ದರೂ ಗುಜರಾತ್, 12 ಲಕ್ಷ ಕೋಟಿಯ ಹೂಡಿಕೆಯನ್ನು ಕಂಡಿದೆ. ಮತ್ತು 25 ಲಕ್ಷ ಯುವಕರು ಉದ್ಯೋಗಾವಕಾಶವನ್ನು ಕಂಡುಕೊಳ್ಳಲಿದ್ದಾರೆ ಎಂದು ಅವರು ನುಡಿದರು. |