ಪ್ರಧಾನಿ ಮನಮೋಹನ್ ಸಿಂಗ್ ಅವರ ಮೂರು ರಕ್ತನಾಳಗಳಲ್ಲಿ ಉಂಟಾಗಿರುವ ತಡೆಯನ್ನು ತೆರವುಗೊಳಿಸಲು ಅವರಿಗೆ ಏಮ್ಸ್(ಎಐಐಎಂಎಸ್)ನಲ್ಲಿ ಬೈಪಾಸ್ ಸರ್ಜರಿ ನಡೆಸಲಾಗುತ್ತಿದೆ.ಏಮ್ಸ್ ಮತ್ತು ಮುಂಬೈಯ ಏಶ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ವೈದ್ಯರನ್ನೊಳಗೊಂಡ ಹನ್ನೊಂದು ವೈದ್ಯರ ತಂಡವು ಡಾ| ರಾಮಾಕಾಂತ್ ಪಾಂಡ ಅವರ ನೇತೃತ್ವದಲ್ಲಿ ಪ್ರಧಾನಿಯವರ ಹೃದಯ ಶಸ್ತ್ರಕ್ರಿಯೆ ನಡೆಯುತ್ತಿದೆ. ಪಾಂಡೆ ಅವರಿಗೆ ಏಮ್ಸ್ ವೈದ್ಯ ಕೆ.ಎಸ್.ರೆಡ್ಡಿ ಅವರು ಸಹಕರಿಸುತ್ತಿದ್ದಾರೆ. ಎರಡು ತಂಡಗಳು ಸಂಪೂರ್ಣ ಶಸ್ತ್ರಕ್ರಿಯೆಯನ್ನು ವೀಕ್ಷಿಸುತ್ತಿವೆ. ವೈದ್ಯರುಗಳಾದ ಪಿ.ಕೆ.ರಾತ್ ಮತ್ತು ವಿಜಯಾ ಡಿಸಿಲ್ವಾ ಅವರು ಶಸ್ತ್ರಕ್ರಿಯಾ ತಂಡದಲ್ಲಿ ತೊಡಗಿದ್ದಾರೆ. ಪ್ರಧಾನಿಯವರ ಆರೋಗ್ಯಸ್ಥಿತಿಯ ಕುರಿತು ಸಾಯಂಕಾಲ ನಾಲ್ಕುಗಂಟೆಯ ವೇಳೆ ಏಮ್ಸ್ ಮೆಡಿಕಲ್ ಬುಲೆಟಿನ್ ಹೊರಡಿಸಲಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ಪ್ರಧಾನಿಯವರಿಗೆ ಸರ್ಜರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಏಮ್ಸ್ ಸುತ್ತಮುತ್ತ ಬಗಿ ಬಂದೊಬಸ್ತ್ ಮಾಡಲಾಗಿದೆ. ಅದರಲ್ಲೂ ಪ್ರಧಾನಿಯವರ ಆಪರೇಶನ್ ನಡೆಯುತ್ತಿರುವ ಕೊಠಡಿ ಸಂಖ್ಯೆ 5 ಭದ್ರಕೋಟೆಯಂತಾಗಿದೆ. ಇದರಿಂದಾಗಿ ಏಮ್ಸ್‌ನ ಕೆಲವು ದಾರಿಗಳನ್ನು ಬದಲಿಸಲಾಗಿದ್ದು, ಸಾಮಾನ್ಯ ರೋಗಿಗಳು ಪರದಾಡುವಂತಾಗಿದೆ. ಸಿಂಗ್ ಅವರ ಸರ್ಜರಿ ಮುಜಾನೆ 8.30ಕ್ಕೆ ಆರಂಭಗೊಂಡಿತು. ಇದಕ್ಕೂ ಮುನ್ನ 7.30ರ ವೇಳೆ ವೈದ್ಯರ ತಂಡವು ಸಭೆ ನಡೆಸಿತು.ಪ್ರಧಾನಿಯವರಿಗೆ ಹೃದಯದ ಶಸ್ತ್ರಕ್ರಿಯೆ ನಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಕೆಲವು ವರ್ಷಗಳ ಹಿಂದೆ ಅವರು ಬ್ರಿಟನ್‌ನಲ್ಲಿ ಶಸ್ತ್ರಕ್ರಿಯೆಗೊಳಗಾಗಿದ್ದರು. ಇದು ಸುಮಾರು ನಾಲ್ಕರಿಂದ ಆರು ಗಂಟೆಯ ಅವಧಿಯ ತನಕ ಮುಂದುವರಿಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.ಜನವರಿ 21ರಂದು ಅವರು ಆಂಜಿಯೋಗ್ರಫಿ ಹಾಗೂ ಇತರ ಪರೀಕ್ಷೆಗಿಗೆ ಒಳಗಾಗಿದ್ದರು. ಈ ವೇಳೆಗೆ ಅವರ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟಿರುವುದು ಪತ್ತೆಯಾಗಿದ್ದು, ಸರ್ಜರಿಯ ಅವಶ್ಯಕತೆ ಕಂಡುಬಂದಿತ್ತು.1990 ರಲ್ಲಿ ಅವರು ಬೈಪಾಸ್ ಸರ್ಜರಿಗೆ ಒಳಗಾಗಿದ್ದರು. 2003ರಲ್ಲಿ ಆಂಜಿಯೋಪ್ಲಾಸ್ಟ್ರಿ ನಡೆಸಲಾಗಿತ್ತು. |