ಪಾಕಿಸ್ತಾನ ಮೂಲದ ಲಷ್ಕರೆ-ಇ-ತೋಯ್ಬಾ ಸಂಘಟನೆಯ ಕಾರ್ಯಕರ್ತರಿಗೆ ತನ್ನ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಲು ಅವಕಾಶ ನೀಡಿದ್ದಾನೆಂಬ ಆರೋಪದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಶನಿವಾರ ಸಿಖ್ ಯುವಕನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಯುವಕ ಈ ಸಹಾಯಕ್ಕೆ ಪ್ರತಿಯಾಗಿ ಉಗ್ರರಿಂದ ಮದ್ಯವನ್ನು ಪಡೆಯುತ್ತಿದ್ದೆನೆನ್ನಲಾಗಿದೆ.
ರಾಜ್ಯ ಆರೋಗ್ಯ ಸೇವೆಯಲ್ಲಿ ಎಕ್ಸ್-ರೇ ಟೆಕ್ನೀಶಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪೊಪೀಂದರ್ ಸಿಂಗ್ ಎಂಬಾತನನ್ನು ಆತನ ಚೌದಾಲ್ ಎಂಬಲ್ಲಿರುವ ನಿವಾಸದಿಂದ ಬಂಧಿಸಲಾಗಿದೆ. ಬಂಧಿತ ಉಗ್ರನೊಬ್ಬ ತನಿಖೆಯ ವೇಳೆಗೆ ತಿಳಿಸಿರುವ ಮಾಹಿತಿಯಾಧಾರದಲ್ಲಿ ಸಿಂಗ್ ಬಂಧನಕ್ಕೀಡಾಗಿದ್ದಾನೆ.
ಹಂದ್ವಾರ ಜಿಲ್ಲೆಯಲ್ಲಿ ಬಾಂಬ್ ಎಸೆದಿರುವ ಪ್ರಕಣರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಅಸ್ಲಂ ಎಂಬಾತನ ವಿಚಾರಣೆ ವೇಳೆಗೆ ಸಿಂಗ್ ಮನೆಯಲ್ಲಿ ಶಸ್ತ್ರಾಸ್ತ್ರ ಇರಿಸಲು ಅನುಕೂಲ ನೀಡಲಾಗಿತ್ತು ಎಂದು ತಿಳಿದು ಬಂದಿದೆ ಪೊಲೀಸರು ತಿಳಿಸಿದ್ದಾರೆ.
ಎರಡು ಕೈಬಾಂಬುಗಳು ಹಾಗೂ ಒಂದು ಪಿಸ್ತೂಲನ್ನು ಆತನ ನಿನಾಸದಿಂದ ವಶಪಡಿಸಲಾಗಿದೆ. ಲಷ್ಕರೆ ಉಗ್ರರು ಸಿಂಗ್ ನೀಡಿರುವ ಸಹಕಾರಕ್ಕೆ ಪ್ರತಿಯಾಗಿ ಒಂದಿಷ್ಟು ಹಣ ಮತ್ತು ಕೆಲವು ಬಾಟಲಿ ಮದ್ಯವನ್ನು ನೀಡಿದ್ದರು. |