ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ಯಶಸ್ವೀ ಬೈಪಾಸ್ ಸರ್ಜರಿ ನಡೆಸಲಾಗಿದೆ. ಮಧ್ಯಾಹ್ನ 3.30ಕ್ಕೆ ಶಸ್ತ್ರಕ್ರಿಯೆ ಅಂತ್ಯಗೊಂಡಿದ್ದು, ಪ್ರಧಾನಿಯವರನ್ನೀಗ ತುರ್ತು ನಿಗಾಘಟಕಕ್ಕೆ ವರ್ಗಾಯಿಸಲಾಗಿದ್ದು ಅವರು ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.ಪ್ರಧಾನಿಯವರಿಗೆ ಬೈಪಾಸ್ ಸರ್ಜರಿ ನಡೆಸುತ್ತಿರುವುದು ಇದು ದ್ವಿತೀಯ ಬಾರಿಯಾಗಿದ್ದು, 11 ವೈದ್ಯರನ್ನೊಳಗೊಂಡ ತಂಡವು ಮುಂಜಾನೆ 8.30ಕ್ಕೆ ಶಸ್ತ್ರಕ್ರಿಯೆ ಆರಂಭಿಸಿತ್ತು. ಆರು ಗಂಟೆಗಳ ಕಾಲದ ಸುದೀರ್ಘ ಶಸ್ತ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.ಪೂರಕ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ. |