ಭಾರತ ಮತ್ತು ಕಜಕಿಸ್ತಾನ ಶನಿವಾರ ಯುರೇನಿಯಂ ಪೂರೈಕೆ ಒಪ್ಪಂದಕ್ಕೆ ಸಹಿಹಾಕಿದೆ. ಇದರನ್ವಯ ರಾಷ್ಟ್ರದ ಅಟೋಮಿಕ್ ಸ್ಥಾವರಗಳಿಗೆ ಅತ್ಯಗತ್ಯವಿರುವ ಯುರೇನಿಯಂ ಪೂರೈಕೆ ಮಾಡಲಾಗುವುದು.
ಇದಲ್ಲದೆ ಭಾರತ ಕಜಕಿಸ್ತಾನದದೊಂದಿಗೆ ಇತರ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿದೆ. ಈ ವೇಳೆ ಭಾರತದ ರಾಷ್ಟ್ರಾಧ್ಯಕ್ಷ ಪ್ರತಿಭಾ ಪಾಟೀಲ್ ಹಾಗೂ ಕಜಕಿಸ್ತಾನದ ಅಧ್ಯಕ್ಷ ನೂರೂಸುಲ್ತಾನ್ ನಜರ್‌ಬಯೇವ್ ಅವರು ಉಪಸ್ಥಿತರಿದ್ದರು.
ಭಾರತೀಯ ಅಣುಶಕ್ತಿ ನಿಗಮ ಹಾಗೂ ಕಜ್ಆಟಂಪ್ರೋಮ್ ಸಹಿಹಾಕಿರುವ ತಿಳುವಳಿಕಾ ಪತ್ರದ ಪ್ರಕಾರ ಕಜಕ್ ಯುರೇನಿಯಂ ಮತ್ತು ಸಂಬಂಧಿತ ಉತ್ಪನ್ನಗಳನ್ನು ಭಾರತಕ್ಕೆ ಪೂರೈಸಲಿದೆ.
|