ಭಾನುವಾರ ನಸುಕಿನಲ್ಲಿ ಇಬ್ಬರು ಶಂಕಿತ ಪಾಕಿಸ್ತಾನ ಉಗ್ರರು ಉತ್ತರ ಪ್ರದೇಶದ ಎಟಿಎಸ್ ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
ಗಣರಾಜ್ಯೋತ್ಸವ ಮುನ್ನಾದಿನದಂದು ಈ ಘಟನೆ ಸಂಭವಿಸಿದೆ. ನೋಯ್ಡಾದ ಸೆಕ್ಟರ್ 97ರಲ್ಲಿ ಗುಂಡಿನ ಕಾಳಗ ಸಂಭವಿಸಿದ್ದು, ಈ ಪ್ರದೇಶವು ದೆಹಲಿಯ ಹೊರಭಾಗದಲ್ಲಿದ್ದು, ರಾಷ್ಟ್ರೀಯ ರಾಜಾಧಾನಿ ಪ್ರದೇಶ(ಎನ್‌ಸಿಆರ್)ದ ಪ್ರಮುಖ ಭಾಗವಾಗಿದೆ. ಸತ್ತುಬಿದ್ದಿರುವ ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸತ್ತವರಲ್ಲಿ ಓರ್ವನನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ತನ್ನ ಹೆಸರನ್ನು ಫಾರೂಕ್ ಎಂದೂ ಪಾಕಿಸ್ತಾನದ ಒಕಾರ ನಿವಾಸಿ ಎಂದೂ ಹಾಗೂ, ತನ್ನ ಸಹಚರನನ್ನು ರಾವಲ್ಕೋಟ್‌ನ ಅಬು ಇಸ್ಮಾಯಿಲ್ ಎಂದೂ ತಿಳಿಸಿದ್ದಾನೆಂದು ಉತ್ತರ ಪ್ರದೇಶದ ಎಡಿಜಿ ಬ್ರಿಜ್‌ಲಾಲ್ ವರದಿಗಾರರಿಗೆ ತಿಳಿಸಿದ್ದಾರೆ.
ರಹೀಂಯಾರ್‌ಕಾನ್ ನಿವಾಸಿ ಅಲಿ ಅಹ್ಮದ್ ಎಂಬ ಹೆಸರಿನ ಒಂದು ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ. ಎರಡು ಎಕೆ 47, 4 ಮ್ಯಾಗಜೀನ್‌ಗಳು, 120 ಬುಲೆಟ್‌ಗಳು, 5 ಗ್ರೇನೇಡುಗಳು, 18 ಸಾವಿರ ನಗದು, ಡಿಟೋನೇಟರ್‌ಗಳು, 9 ಆರ್‌ಡಿಎಕ್ಸ್ ರಾಡ್‌ಗಳು ಮತ್ತು ಒಂದು ರಕ್ಸಾಕನ್ನು ಕಾರಿನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಬ್ರಿಜ್‌ಲಾಲ್ ಹೇಳಿದ್ದಾರೆ.
ಗುಂಡಿನ ಕಾಳಗದ ವೇಳೆಗೆ ವಿನೋದ್ ಕುಮಾರ್ ಎಂಬ ಎಟಿಎಸ್ ಪೊಲೀಸ್ ಗಾಯಗೊಂಡಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದೂ ಆವರು ಹೇಳಿದ್ದಾರೆ.
ಸಶಸ್ತ್ರಧಾರಿ ಉಗ್ರರು ಯುಪಿ14ಇ 9531 ನಂಬರಿನ ಮಾರುತಿ-800 ಕಾರಿನಲ್ಲಿ ದೆಹಲಿ ಪ್ರವೇಶಿಸಲು ಯತ್ನಿಸಿದ್ದರು. ಈ ಮಾಹಿತಿ ಲಭಿಸಿದ ತಕ್ಷಣ ಎಟಿಎಸ್ ಇವರನ್ನು ಬೆಂಬತ್ತಿತ್ತು. ಕಾರು ಮಹಾಮಾಯಾ ಫ್ಲೈಓವರ್ ತಲುಪಿದಾಗ ಪೊಲೀಸರು ಅವರನ್ನು ತಡೆದರು. ಆವರು ನೋಯ್ಡಾ-ಡೆಲ್ಲಿ ಎಕ್ಸ್‌ಪ್ರೆಸ್ ವೇಯಲ್ಲಿ ಸೆಕ್ಟರ್ 97ರ ಮೂಲಕ ಪರಾರಿಯಾಗಲು ಯತ್ನಿಸಿದರು ಎಂಬುದಾಗಿ ಎಟಿಎಸ್‌ನ ಎಸ್ಎಸ್‌ಪಿ ನವೀನ್ ಅರೋರಾ ಹೇಳಿದ್ದಾರೆ.
ಪೊಲೀಸರು ತಡೆದಾಗ ಉಗ್ರರರು ಪೊಲೀಸರ ಮೇಲೆ ಗುಂಡು ಹಾರಿಸಲಾರಂಭಿಸಿದರು. ಪ್ರತಿಯಾಗಿ ಪೊಲೀಸರೂ ಗುಂಡು ಹಾರಿಸಿದ್ದು, ಗಾಯಗೊಂಡ ಅವರನ್ನು ವಶಪಡಿಸಿಕೊಂಡಿದ್ದರು. ಇವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಸ್ಪತ್ರೆಯಲ್ಲಿ ಇವರು ಸತ್ತಿರುವುದಾಗಿ ಘೋಷಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ರಾಘವೇಂದ್ರ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಬೇಕೆನ್ನುವ ಒತ್ತಡ ಪಕ್ಷದಲ್ಲಿ ಹೆಚ್ಚುತ್ತಿದೆ.
ಶಿವಮೊಗ್ಗ ಜಿಲ್ಲೆಯ ಕೆಲವು ಮುಖಂಡರ ನಿಯೋಗವು, ಚುನಾವಣಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಅವರನ್ನು ಭೇಟಿಯಾಗಿ ಈ ಕುರಿತು ಒತ್ತಾಯಿಸಿದ್ದಾರೆ.
ಆಹಾರ ಸಚಿವ ಹಾಲಪ್ಪ, ಸಾಗರ ಕ್ಷೇತ್ರದ ಶಾಸಕ ಬೇಲೂರು ಗೋಪಾಲಕೃಷ್ಣ ಮುಂತಾದವರು ನಿಯೋಗದಲ್ಲಿದ್ದರು. ಆಯನೂರು ನಂಜುನಾಥ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವುದರಿಂದ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ರಾಘವೇಂದ್ರ ಅವರಿಗೆ ಟಿಕೆಟ್ ನೀಡುವುದರಿಂದ ಅವರ ಗೆಲುವಿನಲ್ಲಿ ಯಡಿಯೂರಪ್ಪ ಅವರ ವರ್ಚಸ್ಸು ಪರಿಣಾಮ ಬೀರುತ್ತದೆ ಎನ್ನುವ ವಾದವನ್ನು ನಿಯೋಗ ಮುಖಂಡರ ಮುಂದಿಟ್ಟಿತು.
ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಯನ್ನು ಬಿಜೆಪಿ ಮುಕ್ತವಾಗಿರಿಸಿಕೊಂಡಿದೆ. ಕಾಂಗ್ರೆಸ್‌ನಿಂದ ಹೊರಬಂದು ಸಿದ್ದರಾಮಯ್ಯ ಪಕ್ಷ ಕಟ್ಟುತ್ತಾರೆ ಎಂಬ ಹಿನ್ನೆಲೆಯಲ್ಲಿ ಇದಕ್ಕೆ ಮಹತ್ವ ಬಂದಿದೆ.
|