ಹೆರಾಯಿನ್ ಹೊಂದಿದ್ದ ಐಪಿಎಸ್ ಅಧಿಕಾರಿಯೊಬ್ಬನನ್ನು ಮಹಾರಾಷ್ಟ್ರ ಎಟಿಎಸ್ ಸ್ಕ್ವಾಡ್ ಬಂಧಿಸಿದೆ. 1995ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಶಾಜಿ ಮೊಹನ್ ಹತ್ತು ಕೆಜಿ ಹೆರಾಯಿನ್ನೊಂದಿಗೆ ಸಿಕ್ಕಿಬಿದ್ದಿರುವುದಾಗಿ ವರದಿಯಾಗಿದೆ. ಈತ ಜಮ್ಮುಕಾಶ್ಮೀರ ಕೇಡರ್ ಅಧಿಕಾರಿ.
ಶನಿವಾರವಷ್ಟೆ ಹರ್ಯಾಣದ ಪೊಲೀಸ್ ಪೇದೆಯೊಬ್ಬ ಎರಡು ಕೆಜೆ ಹೆರಾಯಿನ್ ಒಯ್ಯತ್ತಿದ್ದಾಗ ಬಂಧನಕ್ಕೀಡಾಗಿದ್ದ. ಈತ ನೀಡಿರುವ ಮಾಹಿತಿಯಾಧಾರದಲ್ಲಿ ಐಪಿಎಸ್ ಅಧಿಕಾರಿಯನ್ನು ಬಂಧಿಸಲಾಗಿದೆ.
ಮೋಹನ್ ಈ ಹಿಂದೆ ಕಾರ್ಯವೆಸಗಿದ್ದ ನಾರ್ಕೋಟಿಕ್ಸ್ ವಿಭಾಗದಿಂದ ಈ ಹೆರಾಯಿನ್ ಅಪಹರಿಸಿರಬಹುದು ಎಂದು ಶಂಕಿಸಲಾಗಿದೆ. |