ಬಿಹಾರದಿಂದ ರೈಲಿನಲ್ಲಿ ನಗರಕ್ಕೆ ಆಗಮಿಸಿದ ಸಂಶಯಾದ ಒಂಬತ್ತು ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರೈಲಿನಲ್ಲಿ ಆಗಮಿಸಿದ್ದ ಶಂಕಿತ ಒಂಬತ್ತು ಮಂದಿಯನ್ನು ಟಾಸ್ಕ್ ಫೋರ್ಸ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರು ಬಿಹಾರ, ಅಸ್ಸಾಂ ಹಾಗೂ ಪಶ್ಚಿಮಬಂಗಾಳದವರೆಂದು ಅಧಿಕಾರಿಗಳು ಹೇಳಿದ್ದಾರೆ. ಅದರಲ್ಲಿ ಕೆಲವರು ಬಾಂಗ್ಲಾದೇಶಿಯರು ಇದ್ದಿರುವುದಾಗಿ ತಿಳಿಸಿದ್ದಾರೆ.
ಮದರಸಾದಲ್ಲಿ ಕಲಿಯಲು ನಗರಕ್ಕೆ ಆಗಮಿಸಿರುವುದಾಗಿ ಕೆಲವರು ತಿಳಿಸಿದರೆ, ಮತ್ತೆ ಕೆಲವರು ಕೆಲಸ ಮಾಡಲು ಆಗಮಿಸಿರುವುದಾಗಿ ಗೊಂದಲದ ಹೇಳಿಕೆ ನೀಡುವ ಮೂಲಕ ಸಂಶಯವನ್ನು ಹುಟ್ಟಿಸಿರುವ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಟಿಎಫ್‌ಪಿ ಮೂಲಗಳು ಹೇಳಿವೆ.
ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಆಗಮಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. |