ಗೃಹಸಚಿವ ಪಿ.ಚಿದಂಬರಂ ಅವರ ಆಂತರಿಕ ಭದ್ರತಾ ಸಲಹಾಗಾರರಾಗಿದ್ದ ಕೆ.ಸಿ.ವರ್ಮಾ ಅವರನ್ನು ರೀಸರ್ಚ್ ಮತ್ತು ಆನಾಲಿಸಿಸ್ ವಿಂಗ್(ರಾ)ನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
1971 ಜಾರ್ಖಂಡ್ ಕೇಡರ್‌ನ ಅಧಿಕಾರಿಯಾಗಿರುವ ವರ್ಮ ಅವರು ಹಾಲಿ ಮುಖ್ಯಸ್ಥ ಅಶೋಕ್ ಚತುರ್ವೇದಿ ಅವರ ಅವಧಿ ಮುಗಿದ ಬಳಿಕ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜನವರಿ 31ರಂದು ಇವರ ಅವಧಿ ಕೊನೆಗೊಳ್ಳಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ವರ್ಮಾ ಅವರನ್ನು ಈ ಹಿಂದೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಮುಖ್ಯಸ್ಥರನ್ನಾಗಿ 2005ರಲ್ಲಿ ನೇಮಿಸಲಾಗಿತ್ತು. ಆ ಬಳಿಕ ಅವರನ್ನು ಸಂಪುಟ ಸಚಿವಾಲಯದ (ಭದ್ರತಾ) ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿತ್ತು.
ಸಚಿವ ಚಿದಂಬರಂ ಅವರು ಕಳೆದ ತಿಂಗಳು ತನ್ನ ಆಂತರಿಕಾ ಭದ್ರತಾ ಸಲಹಾಗಾರನ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿದ್ದರು. |