ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದೇಶಾದ್ಯಂತ 60ನೇ ಗಣರಾಜ್ಯೋತ್ಸವ ಸಂಭ್ರಮ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶಾದ್ಯಂತ 60ನೇ ಗಣರಾಜ್ಯೋತ್ಸವ ಸಂಭ್ರಮ
ಕಜಕಿಸ್ತಾನದ ಅಧ್ಯಕ್ಷ ನೂರ್ ಸುಲ್ತಾನ್ ವಿಶೇಷ ಅತಿಥಿ
ಪ್ರಧಾನಿ ಡಾ.ಮನಮೋಹನ್ ಅವರ ಗೈರು ಹಾಜರಿಯಲ್ಲಿ, ರಕ್ಷಣಾ ಸಚಿವ ಎ.ಕೆ.ಆಂಟನಿ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಈ ಬಾರಿಯ ವಿದೇಶಿ ಅತಿಥಿ ಕಜಕಿಸ್ತಾನದ ಅಧ್ಯಕ್ಷ ನೂರ್ ಸುಲ್ತಾನ್ ಅವರ ಸಮ್ಮುಖದಲ್ಲಿ ಕೆಂಪುಕೋಟೆಯ ಮೇಲೆ 60ನೇ ಗಣರಾಜ್ಯೋತ್ಸವದ ತ್ರಿವರ್ಣ ಧ್ವಜ ಹಾರಿಸಲಾಯಿತು.

ಪ್ರಧಾನಿ ಮನಮೋಹನ್ ಸಿಂಗ್ ಅವರು ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಗೈರು ಹಾಜರಾಗಿದ್ದು, ಅವರ ಸ್ಥಾನವನ್ನು ಔಪಚಾರಿಕವಾಗಿ ರಕ್ಷಣಾ ಸಚಿವ ಎ.ಕೆ.ಆಂಟನಿ ವಹಿಸಿದ್ದಾರೆ.

ರಾಜ್ ಪಥ್ ಮೈದಾನದಲ್ಲಿ ಅದ್ದೂರಿಯಾಗಿ ಸೇನಾ ಕವಾಯತು ನಡೆಯಿತು, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ 21ಕುಶಾಲು ತೋಪುಗಳನ್ನು ಹಾರಿಸುವ ಮೂಲಕ ವಂದನೆ ಸಲ್ಲಿಸಲಾಯಿತು. ಎ.ಕೆ.ಆಂಟನಿ ಅವರು ಅಮರ್ ಜವಾನ್ ಸ್ತೂಪಕ್ಕೆ ನಮನ ಸಲ್ಲಿಸಿದರು.
ಪ್ರತಿಬಾರಿಯ ಸಂಪ್ರದಾಯದಂತೆ 60ನೇ ಗಣರಾಜ್ಯೋತ್ಸವಕ್ಕೆ ಕಜಕಿಸ್ತಾನದ ರಾಷ್ಟ್ರಪತಿ ನೂರ್ ಸುಲ್ತಾನ್ ಅವರನ್ನು ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು.

ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ: ದೇಶದ ಎಲ್ಲೆಡೆ, ಶಾಲಾ-ಕಾಲೇಜು, ಅಂಚೆ ಕಚೇರಿ ಸೇರಿದಂತೆ ಖಾಸಗಿ ಸಂಸ್ಥೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ 60ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಗಣರಾಜ್ಯೋತ್ಸವ ಸಮಾರಂಭದಲ್ಲಿ ವೀರಯೋಧರಿಗೆ ಅಶೋಕ ಚಕ್ರವನ್ನು ಪ್ರದಾನಿಸಲಾಯಿತು.

ಎಲ್ಲೆಡೆ ಸರ್ಪಗಾವಲು: ಗಣರಾಜ್ಯೋತ್ಸವ ನಿಮಿತ್ತ ರಾಜಧಾನಿ ಸೇರಿದಂತೆ ದೇಶದ ಆಯಾ ಕಟ್ಟಿನ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಉಗ್ರರ ದಾಳಿ ನಡೆಯಬಹುದು ಎಂಬ ಮುನ್ನೆಚ್ಚರಿಕೆಯ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರಾ ಮುಖ್ಯಸ್ಥರಾಗಿ ಕೆ.ಸಿ.ವರ್ಮ ನೇಮಕ
ಹೈದರಾಬಾದ್: 9 ಶಂಕಿತರ ಬಂಧನ
ಹೆರಾಯಿನ್ ಹೊಂದಿದ್ದ ಐಪಿಎಸ್ ಅಧಿಕಾರಿ ಬಂಧನ
ಬೈಪಾಸ್ ಸರ್ಜರಿಗೊಳಗಾದ ಪ್ರಧಾನಿ ಚೇತರಿಕೆ
ಸಂದೀಪ್‌ಗೆ ಅಶೋಕ್ ಚಕ್ರ
ನೋಯ್ಡಾ: ಶಂಕಿತ ಪಾಕ್ ಉಗ್ರರು ಗುಂಡಿಗೆ ಬಲಿ