ಕರ್ನಾಟಕ ಮೂಲದ ಮಾಧವನ್ ನಾಯರ್ (ಪದ್ಮವಿಭೂಷಣ), ಇತಿಹಾಸತಜ್ಞ ರಾಮಚಂದ್ರ ಗುಹಾ (ಪದ್ಮಭೂಷಣ) ಹಾಗೂ ಬನ್ನಂಜೆ ಗೋವಿಂದಾಚಾರ್ಯ, ಐಶ್ವರ್ಯ ರೈ, ಮತ್ತೂರು ಕೃಷ್ಣಮೂರ್ತಿ, ಶಶಿದೇಶಪಾಂಡೆ ,ಪಂಕಜ್ ಅಡ್ವಾಣಿ, ಬಿ.ಆರ್.ಶೆಟ್ಟಿ ಅವರಿಗೆ ಪದ್ಮಶ್ರೀ ಸಹಿತ 133ಮಂದಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ದೇಶದ ಎರಡನೇ ಅತ್ಯುನ್ನತ ನಾಗರಿಕ ಸನ್ಮಾನ ಪದ್ಮವಿಭೂಷಣಕ್ಕೆ ಖ್ಯಾತ ಪರಿಸರವಾದಿ ಸುಂದರಲಾಲ್ ಬಹುಗುಣ, ಚಂದ್ರಯಾನದ ರೂವಾರಿ ಮಾಧವನ್ ನಾಯರ್, ಮಿಷನರಿ ಆಫ್ ಚಾರಿಟೀಸ್‌ನ ಮುಖ್ಯಸ್ಥೆ ಸಿಸ್ಟರ್ ನಿರ್ಮಲಾ, ಖ್ಯಾತ ಅಣುವಿಜ್ಞಾನಿ ಕಾಕೋಡ್ಕರ್ ಸಹಿತ 10ಮಂದಿ ಪಾತ್ರರಾಗಿದ್ದಾರೆ.ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನಕ್ಕೆ ಪಂಡಿತ್ ಭೀಮಸೇನ್ ಜೋಷಿ ಅವರ ಹೆಸರನ್ನು ಕಳೆದ ನವೆಂಬರ್‌ನಲ್ಲಿಯೇ ಘೋಷಿಸಲಾಗಿತ್ತು. ಪದ್ಮವಿಭೂಷಣಕ್ಕೆ ಪಾತ್ರರಾದ ಇತರರೆಂದರೆ ಸ್ವೀಡನ್ ಮೂಲದ ವಿಶ್ವಸಮುದ್ರಯಾನ ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಚಂದ್ರಿಕಾ ಪ್ರಸಾದ್ ಶ್ರೀವಾಸ್ತವ್, ಖ್ಯಾತ ಇತಿಹಾಸಕಾರ ಡಿ.ಪಿ.ಚಟ್ಟೋಪಾಧ್ಯಾಯ, ವೈದ್ಯಕೀಯ ರಂಗದ ಜಸ್ಪೀರ್ ಸಿಂಗ್ ಬಜಾಜ್ ಮತ್ತು ಪುರುಷೋತ್ತಮ ಲಾಲ್, ಮಾಜಿ ರಾಜ್ಯಪಾಲ ಗೋವಿಂದ ನಾರಾಯಣ ಹಾಗೂ ಉದ್ಯಮಿ ಎ.ಎಸ್.ಗಂಗೂಲಿ.ಮೂರನೇ ಅತ್ಯುನ್ನತ ಪದ್ಮಭೂಷಣ ಪ್ರಶಸ್ತಿಗೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಗಳಿಸಿದ್ದ ಅಭಿನವ್ ಬಿಂದ್ರಾ, ರಾಷ್ಟ್ರೀಯ ಜ್ಞಾನ ಆಯೋಗದ ಸ್ಯಾಮ್ ಪಿತ್ರೋಡಾ, ಅರ್ಥಶಾಸ್ತ್ರಜ್ಞ ಇಷಾರ್ ಜಡ್ಜ್ ಅಹ್ಲುವಾಲಿಯಾ, ಹಿರಿಯ ಪತ್ರಕರ್ತ ಶೇಖರ್ ಗುಪ್ತಾ ಸಹಿತ 30ಮಂದಿ ಪಾತ್ರರಾಗಿದ್ದಾರೆ. ಒಟ್ಟು 93ಮಂದಿಗೆ 4ನೇ ಅತ್ಯುತ್ತನ ನಾಗರಿಕ ಪ್ರಶಸ್ತಿ ಪದ್ಮಶ್ರೀಯನ್ನು ನೀಡಲಾಗಿದೆ. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸ್ಪಿನ್ನರ್ ಹರಭಜನ್ ಸಿಂಗ್, ಗಾಯಕ ಉದಿತ್ ನಾರಾಯಣ, ನಟಿ ಐಶ್ವರ್ಯಾ, ನಟ ಅಕ್ಷಯ್ ಕುಮಾರ್, ವಿಶ್ವಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾಣಿ, ಸಂಗೀತಕಾರ ಹೃದಯನಾಥ ಮಂಗೇಷ್ಕರ್ ಸೇರಿದ್ದಾರೆ. |