ಸತ್ಯಂ ಕಂಪ್ಯೂಟರ್ಸ್‌ನ 7,800 ಕೋಟಿ ರೂಪಾಯಿ ಗೋಲ್ಮಾಲ್ ಹಗರಣದ ಸ್ವತಂತ್ರ ತನಿಖೆಯನ್ನು ಆದಾಯ ತೆರಿಗೆ ಇಲಾಖೆ ಆರಂಭಿಸಿದೆ. ಇಲಾಖೆಯು ತನ್ನ ತನಿಖೆಯನ್ನು ಟಿಡಿಎಸ್ ಮತ್ತು ಸತ್ಯಂನ ಬೇನಾಮಿ ವ್ಯವಹಾರದತ್ತ ಕೇಂದ್ರೀಕರಿಸಲಿದೆ." ನಾವು ಸತ್ಯಂ ಪ್ರಕರಣದ ಕುರಿತು ಸ್ವತಂತ್ರ ತನಿಖೆ ನಡೆಸುತ್ತಿದ್ದೇವೆ" ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ ಅಧ್ಯಕ್ಷ ಎನ್.ಬಿ. ಸಿಂಗ್ ಮಂಗಳವಾರ ವರದಿಗಾರರಿಗೆ ತಿಳಿಸಿದ್ದಾರೆ.ಅವರು ತನಿಖೆಗೆ ಸಮಯ ಮಿತಿಯನ್ನು ಹೇರಲು ನಿರಾಕರಿಸಿದರು. ಇದಕ್ಕೆ ಸಮಯವನ್ನು ನಿಗದಿಪಡಿಸಲು ಸಾಧ್ಯವಿಲ್ಲ, ಆದರೆ ಪ್ರಕ್ರಿಯೆಯನ್ನು ಶೀಘ್ರಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.ಸತ್ಯಂ ಕುರಿತು ಇದೀಗಾಗಲೇ, ಆಂಧ್ರ ಪೊಲೀಸ್, ಸೆಬಿ ಹಾಗೂ ಗಂಭೀರ ವಂಚನೆಯ ತನಿಖಾ ಕಚೇರಿ ತನಿಖೆಗಳನ್ನು ಕೈಗೆತ್ತಿಕೊಂಡಿವೆ. |