ನಗರದ ಹೊರವಲಯದ ತಲಾಯುತು ಎಂಬಲ್ಲಿ ಲಾರಿ ಮತ್ತು ವ್ಯಾನ್ ಮುಖಾಮುಖಿಯಾಗಿದ್ದು, ಆರು ಮಹಿಳೆಯರು ಸೇರಿದಂತೆ 15 ಮಂದಿ ಸಾವನ್ನಪ್ಪಿದ್ದಾರೆ.
ವ್ಯಾನಿನಲ್ಲಿದ್ದ ಈ ನತದೃಷ್ಟರು ತಿರುವಾಯುರು ಯಾತ್ರೆಯಿಂದ ಹಿಂತಿರುಗುತ್ತಿದ್ದರು. ಹಾಲಿನ ಪ್ಯಾಕೇಟುಗಳನ್ನು ಹೇರಿಕೊಂಡು ಎದುರಿನಿಂದ ಬರುತ್ತಿದ್ದ ಲಾರಿ ಹಾಗೂ ವ್ಯಾನ್ ಮುಖಾಮುಖಿ ಡಿಕ್ಕಿಯಾಗಿತ್ತು. ಲಾರಿಯು ಮಧುರೈನಿಂದ ನಾಗರ್‌ಕೋವಿಲ್‌ಗೆ ಸಾಗುತ್ತಿತ್ತು.
ಸ್ಥಳಕ್ಕೆ ಧಾವಿಸಿದ್ದ ಪೊಲೀಸ್ ಅಧಿಕಾರಿಗಳು ಗಾಯಾಳುಗಳನ್ನು ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.
ವಾಹನ ದಟ್ಟಣೆಯ ತಿರುನೆಲ್ವೇಲಿ-ಮಧುರೈ ಹೈ ವೇಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. |