ಮುಸ್ಲಿಮರು ಯೋಗಾಭ್ಯಾಸ ನಡೆಸುವ ವಿರುದ್ಧ ಇಂಡೋನೇಶ್ಯಾ ನಿಷೇಧ ಹೇರಿರುವುದಕ್ಕೆ ವಿರುದ್ಧವಾದ ಹೇಳಿಕೆ ನೀಡಿರುವ ಭಾರತೀಯ ಇಸ್ಲಾಮಿಕ್ ಸೆಮಿನರಿಯು ಆರೋಗ್ಯಕಾರಣಕ್ಕಾಗಿ ಯೋಗಾಭ್ಯಾಸ ನಡೆಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಹೇಳಿದೆ. ಉತ್ತರ ಪ್ರದೇಶದ ದೇವಬಂದ್ ಪಟ್ಟಣದಲ್ಲಿರುವ ಅತ್ಯಂತ ಪ್ರಮುಖ ಸೆಮಿನರಿಯ ಧಾರ್ಮಿಕ ಮುಖಂಡರು "ಇಸ್ಲಾಮೇತರ ಧಾರ್ಮಿಕ ವಿಧಿವಿಧಾನಗಳನ್ನು ಒಳಗೊಳ್ಳದ ಯೋಗಾಭ್ಯಾಸ ಎಂದಿದ್ದರೂ ಉತ್ತಮ" ಎಂಬ ಅಭಿಪ್ರಾಯ ಸೂಚಿಸಿದ್ದಾರೆ.
"ಇಸ್ಲಾಮ್ ಯೋಗಾಭ್ಯಾಸ ಅಥವಾ ಶಾರೀರಿಕ ವ್ಯಾಯಾಮ ಮಾಡುವುದರಿಂದ ಯಾರನ್ನೂ ತಡೆಯುವುದಿಲ್ಲ. ಒಂದೇ ವಿಚಾರವೆಂದರೆ, ಯಾವ ನಂಬುಗೆಯ ಆಧಾರದಲ್ಲಿ ನೀವದನ್ನು ಮಾಡುತ್ತೀರಿ ಎಂಬುದು ಪ್ರಶ್ನೆ. ಇದನ್ನು ನೀವು ಆರೋಗ್ಯ ಹಿನ್ನೆಲೆಯಲ್ಲಿ ಮಾಡುತ್ತಿರೆಂದಾದರೆ, ಯೋಗಾಭ್ಯಾಸ ಅಥವಾ ಇತರ ಯಾವುದೇ ವ್ಯಾಯಾಮವನ್ನು ಧಾರಾಳವಾಗಿ ಮಾಡಬಹುದು" ಎಂಬುದಾಗಿ ಕ್ವಾರಿ ಉಸ್ಮಾನ್ ಹೇಳಿದ್ದಾರೆ. ಉಸ್ಮಾನ್ ಅವರು ದಾರೂಲ್ ಉಲೂಮ್‌ನ ಹದಿತ್‌ನಲ್ಲಿ ಹೇಳಿದ್ದಾರೆ.
"ಆರೋಗ್ಯಕರ ಜೀವನ ಸಾಗಿಸುವಂತೆ ಪ್ರವಾದಿಯವರೇ ಹೇಳಿದ್ದರು. ಮುಸ್ಲಿಂ ನಾಗರಿಕತೆಯಲ್ಲಿ ನಾನಾ ವಿಧದ ವ್ಯಾಯಾಮದ ಸಂಪ್ರದಾಯಗಳಿವೆ" ಎಂದು ಉಸ್ಮಾನ್ ಹೇಳಿದ್ದಾರೆ. ಅವರು ಸೆಮಿನರಿಯ ಮಾಜಿ ಕುಲಪತಿಗಳಾಗಿದ್ದರು.
ಹಿಂದೂಗಳಲ್ಲದವರು ಯೋಗಾಭ್ಯಾಸ ಮಾಡುವ ವೇಳೆ 'ಓಂ' ಬದಲಿಗೆ 'ಅಲ್ಲಾ' ಎಂಬುದಾಗಿ ಪಠಿಸಬಹುದು ಎಂದು ಯೋಗಾ ಗುರು ಬಾಬಾ ರಾಮದೇವ್ ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತ್ರಿಕ್ರಿಯಿಸಿರು ಉಸ್ಮಾನ್, "ವ್ಯಾಯಾಮಗಳನ್ನು ಮಾಡುವುದು ದೈಹಿಕ ಫಿಟ್‌ನೆಸ್‌ಗಾಗಿ. ಇದರಲ್ಲಿ ಧಾರ್ಮಿಕ ಮಂತ್ರಗಳನ್ನು ಯಾಕೆ ಬಳಸಬೇಕು" ಎಂದು ಪ್ರಶ್ನಿಸುತ್ತಾರೆ.
ಭಾರತದಲ್ಲಿ ಸುಮಾರು 140 ಮುಸ್ಲಿಮರಿದ್ದು, ವಿಶ್ವದಲ್ಲಿ ಅತ್ಯಧಿಕ ಮುಸ್ಲಿಮರನ್ನು ಹೊಂದಿರುವ ತೃತೀಯ ರಾಷ್ಟ್ರವಾಗಿದೆ. ಇಂಡೋನೇಶ್ಯ ಮತ್ತು ಪಾಕಿಸ್ತಾನ ಹೊರತು ಪಡಿಸಿದರೆ ಅತ್ಯಧಿಕ ಮುಸ್ಲಿಮರಿರುವುದು ಭಾರತದಲ್ಲಿ. |