ಎಚ್ಐವಿ ಪಾಸಿಟೀವ್ ಇದೆ ಎಂಬ ಕಾರಣಕ್ಕಾಗಿ ಇಲ್ಲಿನ ಎಂಜೀನಿಯರಿಂಗ್ ಕಾಲೇಜೊಂದು ತನ್ನ ಸಿಬ್ಬಂದಿಗಳನ್ನು ಕಿತ್ತುಹಾಕಿರುವುದಾಗಿ ವರದಿಯಾಗಿದೆ.
ಇವರಲ್ಲೊಬ್ಬ ಮಹಿಳೆಯ ಸ್ಥಿತಿ ಚಿಂತಾಜನಕ. ಈ 38ರ ಹರೆಯದ ಮಹಿಳೆಯ ಪತಿ ಐದು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ತನ್ನ ಜೀವನೋಪಾಯಕ್ಕಾಗಿ ತಮಿಳ್ನಾಡಿನ ದಿಂಡಿಗಲ್ ಜಿಲ್ಲೆಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಂಡಿದ್ದರು.
ಕಾಲೇಜು ತನ್ನ ಸಿಬ್ಬಂದಿಗಳಿಗಾಗಿ ಸಾಮಾನ್ಯ ಆರೋಗ್ಯ ತಪಾಸಣೆ ಹಮ್ಮಿಕೊಂಡಿದ್ದಾಗ ಇತರ ಮೂರು ಸಹೋದ್ಯೋಗಿಗಳೊಂದಿಗೆ ಈಕೆಗೂ ಎಚ್ಐವಿ ಪಾಸಿಟೀವ್ ಇರುವುದು ತಿಳಿಯಿತು. ತಕ್ಷಣವೇ ಕಾಲೇಜು ಪ್ರಾಧಿಕಾರವು ಈ ಎಲ್ಲಾ ನಾಲ್ಕು ಸಿಬ್ಬಂದಿಗಳನ್ನು ತಕ್ಷಣವೇ ಕೆಲಸದಿಂದ ತೆಗೆದು ಹಾಕಿದೆ.
|