ತನ್ನ ಸಹೋದ್ಯೋಗಿಯೊಬ್ಬರಿಗೆ ಲಂಚದ ಆಮಿಷ ಒಡ್ಡಿದ ಪೊಲೀಸ್ ಅಧಿಕಾರಿಯೊಬ್ಬ ಆಂಧ್ರ ಪ್ರದೇಶದ ಭ್ರಷ್ಟಾಚಾರ ವಿರೋಧಿ ಬ್ಯೂರೋದ ಬಲೆಗೆ ಬಿದ್ದಿರುವುದಾಗಿ ವರದಿಯಾಗಿದೆ.
ಡಿಐಜಿ(ಜೈಲು) ಸಾಮ್ಯುಯೆಲ್ ಜಾನ್ಸನ್ ಎಂಬವರು ತನ್ನ ಸಹೋದ್ಯೋಗಿ ಎಡಿಜಿ ಲೋಕೇಂದ್ರ ಶರ್ಮಾ ಅವರಿಗೆ 50 ಸಾವಿರ ನೀಡಲು ಮುಂದಾಗಿದ್ದರು ಎಂದು ಹೇಳಲಾಗಿದೆ.
ತನಗೆ ಭಡ್ತಿಗಾಗಿ ಶಿಫಾರಸ್ಸು ನೀಡಲು ಜಾನ್ಸನ್ ಲಂಚ ನೀಡಲು ಮುಂದಾಗಿದ್ದರೆನ್ನಲಾಗಿದೆ. ಆದರೆ ಲಂಚ ಸ್ವೀಕರಿಸದ ಶರ್ಮಾ ಭ್ರಷ್ಟಾಚಾರ ವಿರೋಧಿ ಬ್ಯೂರೋಗೆ ಮಾಹಿತಿ ನೀಡಿದ್ದು, ಇದೀಗ ಪ್ರಕರಣ ದಾಖಲಾಗಿದೆ.
ಆದರೆ ತಾನು ಲಂಚನೀಡಲು ಮುಂದಾಗಿರುವುದನ್ನು ಅಲ್ಲಗಳೆದಿರುವ ಜಾನ್ಸನ್, ಈ ಹಣವನ್ನು ತಾನು ಲ್ಯಾಪ್ಟಾಪ್ಗಾಗಿ ಮಿತ್ರನೊಬ್ಬನಿಗೆ ನೀಡಲು ತಂದಿದ್ದು, ಅದು 'ಅಕಸ್ಮತ್ತಾಗಿ' ಹೆಚ್ಚುವರಿ ಡಿಜಿ ಕಚೇರಿಗೆ ತಲುಪಿದೆ ಎಂದಿದ್ದಾರೆ. |