ಶ್ರೀಲಂಕಾ ತಮಿಳರ ಹಿತಾಸಕ್ತಿಗಾಗಿ ಭಾರತವು ಶ್ರೀಲಂಕಾ ಸರ್ಕಾರದೊಂದಿಗೆ ಕೈ ಜೋಡಿಸಲಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿನ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಎಲ್ಲಾ ಶ್ರೀಲಂಕಾದ ಪ್ರಜೆಗಳು, ಅದರಲ್ಲಿ ವಿಶೇಷವಾಗಿ ತಮಿಳು ಸಮುದಾಯವು ಸಹಜ ಜೀವನವನ್ನು ನಡೆಸಲು ಅನುಕೂಲವಾಗುವುವಂತೆ ನಾವು ಶ್ರೀಲಂಕಾ ಸರ್ಕಾರದೊಂದಿಗೆ ಕಾರ್ಯವೆಸಗಲಿದ್ದೇವೆ ಎಂದು ಪ್ರಣಬ್ ಹೇಳಿದ್ದಾರೆ.
ಶ್ರೀಲಂಕಾ ಸರ್ಕಾರವು ಎಲ್ಟಿಟಿಇಯ ಎಲ್ಲಾ ನೆಲೆಗಳನ್ನು ಪುಡಿಗಟ್ಟಿರುವ ಹಿನ್ನೆಲೆಯಲ್ಲಿ ತಮಿಳ್ನಾಡಿನ ರಾಜಕೀಯ ಪಕ್ಷಗಳ ಒತ್ತಡದ ಹಿನ್ನೆಲೆಯಲ್ಲಿ ಪ್ರಣಬ್ ಮುಖರ್ಜಿ ಮಂಗಳವಾರ ಶ್ರೀಲಂಕಾಗೆ ದೌಡಾಯಿಸಿದ್ದರು. |