ವಾಜಪೇಯಿ ಅವರ ಲಕ್ನೋ ಲೋಕಸಭಾ ಸ್ಥಾನವನ್ನು ಬಿಜೆಪಿ ನಾಯಕಿ, ಮಾಜಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸುಶ್ಮಾ ಸ್ವರಾಜ್ ಆವರಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಪಕ್ಷವು ಇದುತನಕ ಯಾವುದೇ ವಿಚಾರವನ್ನು ದೃಢಪಡಿಸದ್ದರೂ, ದಿನದಿಂದ ದಿನಕ್ಕೆ ಈ ವಿಚಾರ ಬಲವಾಗುತ್ತಿದೆ. ಗುರುವಾರ ದೆಹಲಿಯಲ್ಲಿ ನಡೆಯಲಿರುವ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವದು ಎಂದು ಪಕ್ಷದ ಹಿರಿಯ ಮುಖಂಡರು ಹೇಳುತ್ತಾರೆ.ಸಮಾಜವಾದಿ ಪಕ್ಷದ ಅಭ್ಯರ್ಥಿ ಸಂಜಯ್ ದತ್ ವಿರುದ್ಧ ಸ್ಫರ್ಧಿಸಲು ಶತ್ರುಘ್ನ ಸಿನ್ನಾ ನಿರಾಕರಿಸಿರುವ ಬಳಿಕ ಸುಶ್ಮಾ ಸ್ವರಾಜ್ ಹೆಸರು ಕೇಳಿಬರುತ್ತಿದೆ." ವಾಜಪೇಯಿಯವರ ಸ್ಥಾನದಲ್ಲಿ ಸ್ಫರ್ಧಿಸಲು ಸ್ವರಾಜ್‌ಗಿಂತ ಬೇರೆ ಅಭ್ಯರ್ಥಿ ಯಾರಿದ್ದಾರೆ" ಎಂಬುದಾಗಿ ಅನಾಮಧೇಯವಾಗಿ ಉಳಿಯಲು ಬಯಸುವ ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ. "ವಾಜಪೇಯಿ ಅವರು ಸ್ಫರ್ಧಿಸಬೇಕು ಎಂಬುದು ನಮ್ಮ ಇಚ್ಛೆ. ಆದರೆ ಅವರು ಸ್ಫರ್ಧಿಸದಿದ್ದರೆ, ಅವರ ಆಶೀರ್ವಾದ ಯಾರಿಗಿದೆಯೋ ಅವರು ಇಲ್ಲಿ ಸ್ಫರ್ಧಿಸುತ್ತಾರೆ" ಎಂಬುದಾಗಿ ಪ್ರಧಾನಿಯವರ ಚುನಾವಣಾ ವ್ಯವಸ್ಥಾಪಕ ಲಾಲ್ಜಿ ಟಂಡನ್ ಹೇಳುತ್ತಾರೆ.ಟಂಡನ್ ಅವರೂ ಲಕ್ನೋ ಸ್ಥಾನದ ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರು. ಅವರು ಸ್ವರಾಜ್ ಅಭ್ಯರ್ಥಿತನಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಮಧ್ಯೆ ಲಕ್ನೋ ಮೇಯರ್ ದಿನೇಶ್ ಶರ್ಮಾ ಅವರು ಈ ಸ್ಥಾನದ ಟಿಕೇಟ್ ಆಕಾಂಕ್ಷಿ. ಆದರೆ ಪಕ್ಷದ ನಾಯಕರು ಈಗಾಗಲೇ ಸ್ವರಾಜ್ ಇಲ್ಲಿನ ಅಭ್ಯರ್ಥಿ ಎಂಬುದನ್ನು ನಿರ್ಧರಿಸಿ ಆಗಿದೆ ಎಂದು ಬಲ್ಲ ಮೂಲಗಳು ಹೇಳುತ್ತವೆ.ಈಮಧ್ಯೆ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರ ಹೆಸರನ್ನು ಗಜಿಯಾಬಾದ್ ಸ್ಥಾನಕ್ಕೆ ಈಗಾಗಲೇ ಘೋಷಿಸಲಾಗಿದೆ. ಪಕ್ಷದ ನಾಯಕರಾದ ವೆಂಕಯ್ಯ ನಾಯ್ಡು ಹಾಗೂ ಸುಶ್ಮಾ ಸ್ವರಾಜ್ ಅವರುಗಳು ಚುನಾವಣೆಯಲ್ಲಿ ಸ್ಫರ್ಧಿಸುವುದಿಲ್ಲ, ಬದಲಿಗೆ, ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ.ಯಾವುದಕ್ಕೂ ಅಂತಿಮ ನಿರ್ಧಾರ ಗುರುವಾರ ಕೇಂದ್ರೀಯ ಸಮಿತಿ ಸಭೆಯ ಬಳಿಕ ಹೊರಬೀಳಲಿದೆ. |