ಉತ್ತರ ಕಾಶ್ಮೀರದ ಸೋಪುರದಲ್ಲಿ ಬುಧವಾರ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ವೇಳೆ, ಲಷ್ಕರೆ-ಇ-ತೋಯ್ಬಾ ಕಮಾಂಡರ್ ಅಬು ಹಂಜಾನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿವೆ.
ಬಾರಮುಲ್ಲಾ ಜಿಲ್ಲೆಯ ಲಷ್ಕರೆ ಕಮಾಂಡರ್ ಆಗಿದ್ದ ಈತ ಅಮರ್‌ಗಡ ಜಿಲ್ಲೆಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಈತ ಜಮ್ಮು ಕಾಶ್ಮೀರದ ಅತ್ಯಂತ ಬೇಕಾಗಿದ್ದ ಉಗ್ರನಾಗಿದ್ದ. ಕಾಶ್ಮೀರ ರಾಜ್ಯ ಮತ್ತು ರಾಷ್ಟ್ರದ ಹಲವಾರು ಕಡೆಗಳಲ್ಲಿ ನಡೆದ ಸ್ಫೋಟಗಳ ರೂವಾರಿ ಈತನೆಂದು ನಂಬಲಾಗಿದೆ.
ಮಂಗಳವಾರ ಆರಂಭವಾದ ಗುಂಡಿನ ಚಕಮಕಿ ಸುಮಾರು 18 ಗಂಟೆಗಳ ಕಾಲ ಮುಂದುವರಿದಿತ್ತು. ಈತನ ಜತೆಗೆ ಇನ್ನೂ ಒಬ್ಬ ಉಗ್ರನಿದ್ದು ಆತನೂ ಸತ್ತಿದ್ದಾನೆಯೇ ಅಥವಾ ಪರಾರಿಯಾಗಿದ್ದಾನೆಯೇ ಎಂಬುದು ದೃಢಪಟ್ಟಿಲ್ಲ. ಇದೇ ವೇಳೆಗೆ 52 ರಾಷ್ಟ್ರೀಯ ರೈಫಲ್‌ನ ಜವಾನನೊಬ್ಬ ಸಾವಿಗೀಡಾಗಿದ್ದು, ಇನ್ನೋರ್ವ ಜವಾನ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ. |