ಸತ್ಯಂ ಕಂಪ್ಯೂಟರ್ಸ್‌ನ ಸಂಸ್ಥಾಪಕರಾದ ರಾಮಲಿಂಗಾ ರಾಜು, ಅವರ ಸಹೋದರ ರಾಮ ರಾಜು ಹಾಗು ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಡ್ಲಮಣಿ ಶ್ರೀನಿವಾಸ್ ಅವರ ಜಮೀನು ಅರ್ಜಿಗಳನ್ನು ಇಲ್ಲಿನ ಸಿಟಿ ಕೋರ್ಟೊಂದು ತಳ್ಳಿಹಾಕಿದೆ.
ಇವರ ಜಾಮೀನು ಅರ್ಜಿಗಳನ್ನು ವಜಾ ಮಾಡಿರುವ ದಂಡಾಧಿಕಾರಿ ಎಸ್ಆರ್ಎಸ್ಆರ್ ಹೋಲ್ಡಿಂಗ್‌ನ ಪ್ರಧಾನ ವ್ಯವಸ್ಥಾಪಕ ಗೋಪಾಲಕೃಷ್ಣ ರಾಜು ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದಾರೆ.
ಎಸ್ಆರ್ಎಸ್ಆರ್ ಹೋಲ್ಡಿಂಗ್ ರಾಮಲಿಂಗಾ ರಾಜು ಪ್ರಾಯೋಜಿತ ಕಂಪೆನಿಯಾಗಿದೆ. ಮತ್ತು ರಾಜು, ಈ ಕಂಪೆನಿಯ ಮೂಲಕ ಸತ್ಯಂ ಶೇರುಗಳನ್ನು ಹೊಂದಿದ್ದರು.
ರಾಮಲಿಂಗಾ ರಾಜು, ರಾಮ ರಾಜು ಮತ್ತು ಶ್ರೀನಿವಾಸ್ ಅವರುಗಳಿಗೆ ಜನವರಿ 31ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. |