ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಪದ್ಮಶ್ರೀ: ಕುಶಲಕರ್ಮಿಯಾದ ರಫ್ತು ಉದ್ಯಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪದ್ಮಶ್ರೀ: ಕುಶಲಕರ್ಮಿಯಾದ ರಫ್ತು ಉದ್ಯಮಿ
ಪದ್ಮಪ್ರಶಸ್ತಿ ಆಯ್ಕಾ ಸಮಿತಿ ಬಲವಾಗಿ ಎಡವಿದಂತೆ ತೋರುತ್ತದೆ. ಜಮ್ಮು ಕಾಶ್ಮೀರದ ಹಸ್ಮತ್ ಉಲ್ಲಾ ಖಾನ್ ಎಂಬವರಿಗೆ ಅಪರೂಪದ ಕನಿ ಶಾಲುಗಳ ಕುಶಲಕಲೆಯ ಪ್ರವೀಣನೆಂಬ ನೆಲೆಯಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಆದರೆ ಖಾನ್ ಅವರು ಕುಶಲಕರ್ಮಿಯಲ್ಲ. ಬದಲಿಗೆ ಅವರು ಇಂತಹ ಅಪರೂಪದ ಶಾಲುಗಳ ರಫ್ತು ವ್ಯಾಪಾರಿಯಾಗಿದ್ದಾರೆ ಮಾತ್ರವಲ್ಲದೆ, ಅವರು ಪ್ರಸಕ್ತ ವಿದೇಶಿ ಪ್ರವಾಸದಲ್ಲಿದ್ದಾರೆ.

ಇದಕ್ಕಿಂತಲೂ ವಿಚಿತ್ರವೆಂದರೆ, ಒಮರ್ ಅಬ್ದುಲ್ಲಾ ಸರ್ಕಾರ ಖಾನ್ ಹೆಸರನ್ನು ಶಿಫಾರಸ್ಸು ಮಾಡಿರಲೇ ಇಲ್ಲವಂತೆ. ಹೀಗೆಂದು ಜಮ್ಮು ಕಾಶ್ಮೀರದ ಅಧಿಕಾರಿ ಹೇಳಿದ್ದಾರೆ. ರಾಜ್ಯದ ಪ್ರಧಾನ ಆಡಳಿತ ಇಲಾಖೆಯು ಈ ಹೆಸರನ್ನು ಪ್ರಶಸ್ತಿಗಾಗಿ ಕಳುಹಿಸಲಿಲ್ಲ. ಸರ್ಕಾರದ ಪರವಾಗಿ ಪದ್ಮಪ್ರಶಸ್ತಿಗೆ ಹೆಸರುಗಳನ್ನು ಶಿಫಾರಸ್ಸು ಮಾಡುವುದು ಈ ಇಲಾಖೆಯ ಜವಾಬ್ದಾರಿ ಎಂದೂ ಅವರು ತಿಳಿಸಿದ್ದಾರೆ.

ಖಾನ್ ಅವರ ಹೆಸರನ್ನು ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ವಿಭಾಗದಲ್ಲಿ ಶಿಫಾರಸ್ಸು ಮಾಡಲಾಗಿತ್ತು. ಆದರೆ, ಖಾನ್ ಹೆಸರು ಕುಶಲಕರ್ಮಿಯ ವರ್ಗದಲ್ಲಿದೆ. ಆದರೆ ಈ ಕಲೆಯ ಪ್ರೋತ್ಸಾಹಕ್ಕಾಗಿ ಅವರಿಗೆ ಪ್ರಶಸ್ತಿ ನೀಡಬಹುದಿತ್ತು. ಆದರೆ ಏನೇ ಆದರೂ ಅವರನ್ನು ಕುಶಲಕರ್ಮಿ ಎಂಬುದಾಗಿ ವರ್ಣಿಸಲು ಸಾಧ್ಯವೇ ಇಲ್ಲ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.

ಇವರ ಹೆಸರನ್ನು ಯಾವುದಾದರೂ ಸರ್ಕಾರೇತರ ಸಂಘಟನೆಗಳು ಶಿಫಾರಸ್ಸು ಮಾಡಿರಬಹುದು. ಆದರೆ, ಹೇಗೆ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂಬುದಕ್ಕೆ ಇದೊಂದು ಖೇದಕರ ನಿದರ್ಶನ ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಹಸ್ಮತ್ ಉಲ್ಲಾ ಖಾನ್ ಅವರಿಗೆ ಪ್ರಶಸ್ತಿ ಘೋಷಣೆಯಾದಾಗ ಈ ವ್ಯಕ್ತಿಯ ಬೆನ್ನು ಹಿಡಿದು ಹೊರಟ ಮಾಧ್ಯಮಗಳು ಕೊನೆಗೂ, ಶೇರ್-ಇ-ಕಾಶ್ಮೀರ ಕೃಷಿವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿಯ ಮನೆಗೆ ತಲುಪಿದ್ದರು. ಆದರೆ, ತಾನು ಸಾಹಿತಿಯೂ ಅಲ್ಲ, ಕುಶಲಕರ್ಮಿಯೂ ಅಲ್ಲ ಅಥವಾ ಪ್ರಶಸ್ತಿ ಬಂದ ಕುರಿತು ಯಾವುದೇ ಮಾಹಿತಿಯನ್ನೂ ಪಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಈ ಮಧ್ಯೆ, ರಫ್ತು ಉದ್ಯಮಿ ಖಾನ್ ಅವರು ಚಾಂದಿನಿ ಚೌಕದ ಮೋತಿ ಬಜಾರಿನಲ್ಲಿರುವ ಶಾಲು ಅಂಗಡಿಯತ್ತ ಗಮನ ಸೆಳೆಯುವ ಪತ್ರಿಕಾ ಹೇಳಿ ನೀಡಿ ಗಮನ ಸೆಳೆದಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ವರಿಗೂ ಗುರುತಿನ ಚೀಟಿ ಯೋಜನೆಗೆ ಚಾಲನೆ
ಪಬ್, ಮಾಲ್ ಸಂಸ್ಕೃತಿಗೆ ಅಶೋಕ್ ಗೆಹ್ಲೋಟ್ ತರಾಟೆ!
ಚುನಾವಣೆ ದಿನಾಂಕ: ಆಯೋಗದಲ್ಲಿ ಭಿನ್ನಮತ
ಪೆಟ್ರೋಲ್ 5, ಡೀಸೆಲ್ 2, ಗ್ಯಾಸ್ 25 ರೂ ಇಳಿಕೆ
ಸಂಘರ್ಷದಲ್ಲಿ 17 ಮಂದಿಗೆ ಗಾಯ
ಪ್ರಧಾನಿ ಆರೋಗ್ಯದಲ್ಲಿ ಸುಧಾರಣೆ