ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳ ವಿಚಾರಣೆಗೊಳಪಡಿಸಲಿದೆ.ಅವರು ಇತ್ತೀಚೆಗೆ ಉಡುಪಿಯಲ್ಲಿ ಮಾಡಿದ್ದ ಭಾಷಣದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ವಾಚಾಮಗೋಚರ ಹೊಗಳಿದ್ದರು. ಇದಲ್ಲದೆ, ಮಾಲೆಗಾಂವ್ ಸ್ಫೋಟದ ಪ್ರಮುಖ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಅವರೂ ಸಹ ವಿಚಾರಣೆ ವೇಳೆ ತನಗೆ ಮುತಾಲಿಕ್ ಗೊತ್ತು ಮತ್ತು ತಾನವರನ್ನು ಪುಣೆಯಲ್ಲಿ ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆನ್ನಲಾಗಿದೆ. ಸಾಧ್ವಿ ಪ್ರಜ್ಞಾ ಸಿಂಗ್ ನಮ್ಮೆಲ್ಲರ ಆದರ್ಶ, ಹಾಗೂ ಅವರದ್ದು ಕ್ರಾಂತಿಕಾರಿ ಸಾಹಸ ಎಂದು ಮುತಾಲಿಕ್ ಸಾರ್ವಜನಿಕ ಭಾಷಣ ಒಂದರಲ್ಲಿ ಹೇಳಿದ್ದಾರೆ.ಮಹಿಳಾ ಆಯೋಗ ಮಂಗಳೂರಿಗೆ ಈ ಮಧ್ಯೆ, ಮಂಗಳೂರಿನ ಪಬ್ ಒಂದರ ಮೇಲೆ ಯುವತಿಯರ ಮೇಲೆ ಶ್ರೀ ರಾಮ್ ಸೇನೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಮಹಿಳಾ ಆಯೋಗ ಮಂಗಳೂರು ತಲುಪಿ ವಿಚಾರಣೆ ಆರಂಭಿಸಿದೆ. |