ಮುಂಬರುವ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಗೆ ಮುಂಚಿತವಾಗಿ ಯುಪಿಎ ಸಾಧ್ಯವಿರುವುದನ್ನೆಲ್ಲಾ ಮಾಡಲು ಮುಂದಾಗಿರುವುದಾಗಿ ತೋರುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಅರು ಲಕ್ಷ ಸಾಮಾಜಿಕ ಆರೋಗ್ಯ ಕಾರ್ಯಕರ್ತರಿಗೆ ಮಾಸಿಕ 500 ರೂಪಾಯಿ ಮಾಸಾಶನ ನೀಡುವ ಪ್ರಸ್ತಾಪವನ್ನು ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ನೇತೃತ್ವದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‌ನ ಮಿಶನ್ ಸ್ಟೀರಿಂಗ್ ಸಮೂಹ(ಎಂಎಸ್ಜಿ) ಅನುಮತಿ ನೀಡಿದೆ. ಈ ಯೋಜನೆಗೆ ಪ್ರತಿವರ್ಷ 700 ಕೋಟಿ ರೂಪಾಯಿ ವೆಚ್ಚ ತಗುಲಲಿದೆ.
ಎಂಎಸ್ಜಿಯಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ರಘುವಂಶ ಪ್ರಸಾದ್ ಸಿಂಗ್, ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಂಗ್ ಸಿಂಗ್ ಅಹ್ಲುವಾಲಿಯಾ ಹಾಗೂ ಯೋಜನಾ ಆಯೋಗದ ಸದಸ್ಯ ಸಯೀದಾ ಹಮೀದ್ ಸೇರಿದ್ದಾರೆ.
ಈ ಆರೋಗ್ಯ ಕಾರ್ಯಕರ್ತರನ್ನು ಗರ್ಭಿಣಿ ಮಹಿಳೆಯರು ವಹಿಸಬೇಕಾದ ಕಾಳಜಿ, ಕುಟುಂಬ ಯೋಜನೆ ಸೇರಿದಂತೆ ಇನ್ನಿತರ ಆರೋಗ್ಯ ವಿಚಾರದ ಕುರಿತು ಸಲಹೆ ನೀಡಲು ಈ ಕಾರ್ಯಕರ್ತರನ್ನು ನೇಮಿಸಲಾಗಿತ್ತು.
ಇದಲ್ಲದೆ, ವಿಧವೆಯರ ಮಾಸಾಸನ ಪ್ರಸ್ತಾಪ ಪ್ರಕ್ರಿಯೆಯನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಗ್ರಾಮೀಣಾಡಳಿತ ಸಚಿವರು ಪ್ರಧಾನಿ ಸ್ಥಾನದ ಉಸ್ತುವಾರಿ ಹೊಂದಿರುವ ಪ್ರಣಬ್ ಮುಖರ್ಜಿಯವರನ್ನು ವಿನಂತಿಸಿದ್ದಾರೆ. ಈ ವಿಚಾರವನ್ನು ತ್ವರಿತಗೊಳಿಸುವಂತೆ ಪ್ರಧಾನಿ ಅವರೇ ಖುದ್ದಾಗಿ ಪ್ರಣಬ್ ಅವರನ್ನು ವಿನಂತಿಸಿದ್ದಾರೆನ್ನಲಾಗಿದೆ. ವಿಧವೆಯರಿಗೆ ತಿಂಗಳೊಂದರ 200 ರೂಪಾಯಿ ನೀಡುವ ಈ ಯೋಜನೆಗೆ ವಾರ್ಷಿಕ 1,700 ಕೋಟಿ ರೂಪಾಯಿ ಅವಶ್ಯಕತೆ ಇದೆ. |