ಮಹಾತ್ಮಾ ಗಾಂಧೀಜಿಯವರ 61ನೆ ಪುಣ್ಯತಿಥಿಯಾದ ಶುಕ್ರವಾರ ರಾಷ್ಟ್ರಾದ್ಯಂತ ಹುತಾತ್ಮರ ದಿನಾಚರಣೆ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಸರ್ವಧರ್ಮೀಯ ಪ್ರಾರ್ಥನೆ, ಭಜನೆಗಳನ್ನು ಹಮ್ಮಿಕೊಂಡಿವೆಯಲ್ಲದೆ, ರಾಷ್ಟ್ರಪಿತನ ಸಂದೇಶವನ್ನು ಸಾರುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.ಶಾಲಾ ಮಕ್ಕಳು ಸೇರಿದಂತೆ ಅನೇಕ ಮಂದಿ ದೆಹಲಿಯ ರಾಜ್ ಘಾಟ್‌ನಲ್ಲಿರುವ ಅವರ ಸಮಾಧಿಗೆ ತೆರಳಿ ಪುಷ್ಪಾಂಜಲಿಯನ್ನು ಸಲ್ಲಿಸಿ ಗೌರವ ಸಮರ್ಪಿಸಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿರುವ ಎನ್‌ಜಿಒ ಒಂದು ಗಾಂಧೀಜಿ ಮಾತನಾಡಲಿ ಎಂಬ ಚಳುವಳಿ ಹಮ್ಮಿಕೊಂಡಿದೆ. ಭಾರತೀಯ ಕರೆನ್ಸಿ ನೋಟುಗಳಲ್ಲಿ ಗಾಂಧೀಜಿಯ ಚಿತ್ರಮಾತ್ರವಿದೆ. ಆದರೆ ಅವರ ಸಂದೇಶಗಳನ್ನು ಸಾರುವ ಘೋಷವಾಕ್ಯಗಳನ್ನು ಸೇರಿಸಬೇಕು ಎಂಬ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ. |