ತಮಿಳ್ನಾಡಿನ ಜನಪ್ರಿಯ ಕ್ರೀಡೆ ಜಲ್ಲಿಕಟ್ಟು(ಹೋರಿಕಾಳಗ) ನಡೆಸದಂತೆ ಸುಪ್ರೀಂಕೋರ್ಟ್ ಶುಕ್ರವಾರ ನಿಷೇಧ ಹೇರಿದೆ. ಫೆ.13ರ ತನಕ ಈ ಕ್ರೀಡೆಗೆ ಅನುಮತಿ ನೀಡಬಾರದು ಎಂಬುದಾಗಿ ತಮಿಳ್ನಾಡು ಸರ್ಕಾರಕ್ಕೆ ನ್ಯಾಯಾಲಯ ತಾಕೀತು ಮಾಡಿದೆ.ಮುಖ್ಯನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಹಾಗೂ ನ್ಯಾಯಮೂರ್ತಿ ಸದಾಶಿವಂ ಅವರನ್ನೊಳಗೊಂಡ ನ್ಯಾಯಪೀಠವು ಈ ಕ್ರೀಡೆಯನ್ನು ಅಮಾನತ್ತುಗೊಳಿಸಿದೆ. ಜಲ್ಲಿಕಟ್ಟು ಕ್ರೀಡೆಯನ್ನು ನಿಷೇಧಿಸಬೇಕು ಎಂದು ಕೋರಿ ಪ್ರಾಣಿ ಕಲ್ಯಾಣ ಮಂಡಳಿಯೊಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ. ಜನವರಿ ತಿಂಗಳೊಂದರಲ್ಲಿಯೇ ಜಲ್ಲಿಕಟ್ಟಿನಿಂದಾಗಿ 21 ಮಂದಿ ಸಾವನ್ನಪ್ಪಿದ್ದು, 1,600 ಮಂದಿ ಗಾಯಗೊಂಡಿದ್ದಾರೆ ಎಂದು ಮಂಡಳಿ ತನ್ನ ಮನವಿಯಲ್ಲಿ ಹೇಳಿದೆ.ಈ ಪ್ರಕರಣದ ಮುಂದಿನ ವಿಚಾರಣೆ ಫೆ.13ರಂದು ನಡೆಯಲಿದೆ. |