ನಾಗರಿಕ ಅಣು ಸಹಕಾರವನ್ನು ಕಾರ್ಯಗತಗೊಳಿಸಲು ಇನ್ನಷ್ಟು ಸನಿಹವಾಗುವ ಹೆಜ್ಜೆ ಎಂಬಂತೆ ಭಾರತವು ವಿಶ್ವಸಂಸ್ಥೆಯ ಅಣುಕಾವಲು ಸಂಸ್ಥೆ ಐಎಇಎಯೊಂದಿಗೆ ವಿಯೆನ್ನಾದಲ್ಲಿ ಪ್ರಮುಖ ತಪಾಸಣಾ ಒಪ್ಪಂದಕ್ಕೆ ಸಹಿಹಾಕಲಿದೆ ಎಂದು ಪರಮಾಣು ಇಂಧನ ವಿಭಾಗ(ಡಿಎಇ) ಮೂಲಗಳು ಶುಕ್ರವಾರ ಹೇಳಿವೆ.
ಐಎಇಎಯೊಂದಿಗಿನ ಒಪ್ಪಂದವು ಅಮೆರಿಕದೊಂದಿಗಿನ ನಾಗರಿಕ ಪರಮಾಣು ಒಪ್ಪಂದದೊಂದಿಗಿನ ಪೂರ್ವಷರತ್ತಾಗಿದೆ. ಈ ಒಪ್ಪಂದವು 45 ಸದಸ್ಯತ್ವದ ಅಣು ಪೂರೈಕೆ ಸಮೂಹ(ಎನ್ಎಸ್‌ಜಿ)ದೊಂದಿಗಿನ ಭಾರತದ 34 ವರ್ಷಗಳ ಪರಮಾಣು ಅಸ್ಪೃಶ್ಯತೆಯನ್ನು ತೊಡೆದು ಹಾಕಲಿದೆ.
ಭಾರತದ ರಾಯಭಾರಿ ಸೌರಬ್ ಕುಮಾರ್ ಅವರು ಐಎಇಎಯೊಂದಿಗಿನ ಈ ಒಪ್ಪಂದಕ್ಕೆ ಸಹಿಹಾಕಲಿದ್ದಾರೆ. ಇದನ್ನು ಬಳಿಕ ನವದೆಹಲಿಯು ಖಾಯಂ ಗೊಳಿಸಲಿದೆ ಎಂದು ಮೂಲಗಳು ಹೇಳಿವೆ. ತಪಾಸಣಾ ಒಪ್ಪಂದವನ್ನು ಅಂತಿಮಗೊಳಿಸಲು ಭಾರತದ ಮುಖ್ಯ ಸಂಧಾನಕಾರ ರವಿ ಗ್ರೋವರ್ ಅವರು ಇದೀಗಾಗಲೇ ವಿಯೆನ್ನಾಗೆ ತೆರಳಿದ್ದಾರೆ. ಅವರು ಅವಶ್ಯಕವಿರುವ ಹೆಚ್ಚುವರಿ ಶಿಷ್ಟಾಚಾರ ಕಾರ್ಯವನ್ನೂ ನಡೆಸುತ್ತಿದ್ದಾರೆ.
|