ನವದೆಹಲಿ: ಚುನಾವಣಾ ಆಯುಕ್ತ ನವೀನ್ ಚಾವ್ಲಾ ತೆರವುಗಾಗಿನ ಸಿಇಸಿ ಎನ್ ಗೋಪಾಲಸ್ವಾಮಿಯ ಶಿಫಾರಸನ್ನು ಪರಿಶೀಲಿಸಿ, ಸೂಕ್ತ ಸಮಯದಲ್ಲಿ ತನ್ನ ಪ್ರತಿಕ್ರಿಯೆ ನೀಡುವುದು ಎಂದು ಸರಕಾರ ತಿಳಿಸಿದೆ. ಈ ವಿಷಯವಾಗಿ ಸಂವಿಧಾನಿಕ ನಿಲುವಿನ ಕುರಿತು ವರದಿಗಾರರು ಕೇಳಿದ ಪ್ರಶ್ನೆಗೆ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಉತ್ತರಿಸುತ್ತಾ ಈ ಹೇಳಿಕೆ ನೀಡಿದರು. ಗೋಪಾಲಸ್ವಾಮಿಯವರ ಈ ಶಿಫಾರಸು ಸಂವಿಧಾನಿಕ ತಜ್ಞರ ವ್ಯಾಪಕ ಟೀಕೆಗೊಳಗಾಗಿತ್ತು. |