ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಯೋಗದ ನಿರ್ಧಾರ ಕಾಂಗ್ರೆಸ್‌ಗೆ ಲೀಕ್ ಮಾಡುತ್ತಿದ್ದ ಚಾವ್ಲಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಯೋಗದ ನಿರ್ಧಾರ ಕಾಂಗ್ರೆಸ್‌ಗೆ ಲೀಕ್ ಮಾಡುತ್ತಿದ್ದ ಚಾವ್ಲಾ
ಇದು ವಿಚಿತ್ರ ಎನಿಸಬಹುದು, ಆದರೆ ಇದೀಗ ವಿವಾದದ ಕೇಂದ್ರಬಿಂದುವಾಗಿರುವ, ಕೇಂದ್ರ ಸರಕಾರವು 'ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಮಾಡಿಯೇ ಸಿದ್ಧ' ಎಂದು ಹೇಳುತ್ತಿರುವ ನವೀನ್ ಚಾವ್ಲಾ ಅವರು ಸೋನಿಯಾ ಗಾಂಧಿ ಅವರ ವಿವಾದಾತ್ಮಕ 'ಮೌತ್ ಕೇ ಸೌದಾಗರ್ (ಸಾವಿನ ಸರದಾರ)' ಹೇಳಿಕೆ ಬಗ್ಗೆ ಆಕೆಗೆ ನೋಟಿಸ್ ನೀಡುವ ಆಯೋಗದ ಕ್ರಮದ ಪರವಾಗಿದ್ದರೂ, ಇದು ಹೊರ ಜಗತ್ತಿಗೆ ತಿಳಿಯಬಾರದೆಂಬ ಭಾವನೆ ಹೊಂದಿದ್ದರು.

ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ನವೀನ್ ಚಾವ್ಲಾರನ್ನು ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗೆ ಕಳುಹಿಸಿರುವ ಪತ್ರದಲ್ಲಿ ಈ ಸಂಗತಿ ಇದೆ. ಚುನಾವಣಾ ಪ್ರಚಾರ ಭಾಷಣವೊಂದರಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು 'ಮೌತ್ ಕೇ ಸೌದಾಗರ್' ಎಂದು ಟೀಕಿಸಿ ಭಾರೀ ವಿವಾದಕ್ಕೆ ತುತ್ತಾಗಿದ್ದ ಸೋನಿಯಾ ಗಾಂಧಿಗೆ ನೋಟಿಸ್ ನೀಡಲು ಚುನಾವಣಾ ಆಯೋಗ ಇಚ್ಛಿಸಿತ್ತು. ಇದಕ್ಕೆ ಮುಖ್ಯ ಆಯುಕ್ತರು ಹಾಗೂ ಇಬ್ಬರು ಆಯುಕ್ತರ ಸಮ್ಮತಿಯೂ ಇತ್ತು. ಈ ನಿರ್ಧಾರ ಕೈಗೊಂಡ ಬಳಿಕ ಮುಖ್ಯ ಚುನಾವಣಾ ಆಯುಕ್ತರಿಗೆ 'ಹೊರಗಿನಿಂದ' ಕರೆಯೊಂದು ಬಂದು, ಇದರಲ್ಲಿ ಆಯುಕ್ತರ ಮಧ್ಯೆ ಭಿನ್ನಾಭಿಪ್ರಾಯವಿದೆಯೇ ಎಂದು ಕೇಳಿತ್ತು. ಮುಖ್ಯ ಆಯುಕ್ತರು ಇದನ್ನು ನಿರಾಕರಿಸಿದಾಗ, ಕರೆ ಮಾಡಿದ ಆ ವ್ಯಕ್ತಿ, 'ನವೀನ್ ಚಾವ್ಲಾ ಈ ಕುರಿತ ತಮ್ಮ ಅಸಮಾಧಾನವನ್ನು ಮಾಧ್ಯಮದ ಪ್ರಮುಖರೊಬ್ಬರಲ್ಲಿ ತೋಡಿಕೊಂಡಿದ್ದಾರೆ' ಎಂದು ಹೇಳಿದ್ದರು.

ಮರು ದಿನವೇ, ಈ ನಿರ್ಧಾರ ಸೋರಿ ಹೋಗಿರುವ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ಅವರು ಚಾವ್ಲಾರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ವರದಿಗಳೂ ಹೇಳಿದ್ದವು. ಆಯೋಗದ ನಿರ್ಣಯ ಸೋರಿ ಹೋಗಿರುವುದನ್ನು ಚಾವ್ಲಾರಲ್ಲಿ ಹೇಳಿದಾಗ, ಸುದ್ದಿಯ ಮೂಲ ಬಹಿರಂಗಪಡಿಸುವಂತೆ ಚಾವ್ಲಾ ಮುಖ್ಯ ಚುನಾವಣಾ ಆಯುಕ್ತರಿಗೆ ಹೇಳಿದ್ದರು. ಈ ಬಗ್ಗೆ 2009ರ ಏಪ್ರಿಲ್ 20ರಂದು (ಗೋಪಾಲಸ್ವಾಮಿ ನಿವೃತ್ತರಾಗುವ ದಿನ) ತಿಳಿಸುವುದಾಗಿ ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದರು.

ಚಾವ್ಲಾರನ್ನು ವಜಾಗೊಳಿಸಬೇಕು ಎಂದು ರಾಷ್ಟ್ರಪತಿಗೆ ಬರೆದಿರುವ 90 ಪುಟಗಳ ಶಿಫಾರಸು ಪತ್ರದಲ್ಲಿ ಗೋಪಾಲಸ್ವಾಮಿ ಈ ವಿಷಯವನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಅಂತೆಯೇ 2005ರ ಬಿಹಾರ ಚುನಾವಣೆ ಸಂದರ್ಭದ ಘಟನೆಯೊಂದರ ಉಲ್ಲೇಖವೂ ಇದೆ. ಚುನಾವಣಾ ಆಯೋಗದ ಅಂದಿನ ಸಲಹೆಗಾರರಾಗಿದ್ದ ಕೆ.ಜೆ.ರಾವ್ ಅವರು ಕಾಂಗ್ರೆಸ್ ಮತ್ತು ಆರ್‌ಜೆಡಿಯನ್ನು ಪಾಕಿಸ್ತಾನಿಗಳು ಎಂದು ಕರೆದಿರುವ ಹಿನ್ನೆಲೆಯಲ್ಲಿ, ಆ ಪಕ್ಷಗಳು ಭಗಲ್ಪುರದ ಮೂರು ಚುನಾವಣಾ ಬೂತ್‌ಗಳಲ್ಲಿ ಮತದಾನ ಬಹಿಷ್ಕರಿಸಿದ್ದವು. ಅಲ್ಲಿ ಮರುಚುನಾವಣೆಗೆ ಕಾಂಗ್ರೆಸ್ ಮತ್ತು ಆರ್‌ಜೆಡಿ ಆಗ್ರಹಿಸಿದ್ದವು.

ಈ ಬಗ್ಗೆ ರಾವ್ ಭೇಟಿ ಸಂದರ್ಭದ ಸಿಡಿ, ಅಲ್ಲಿನ ಜಿಲ್ಲಾಧಿಕಾರಿ ವರದಿಗಳನ್ನೆಲ್ಲಾ ಪರಿಶೀಲಿಸಿದಾಗ, ಕೆ.ಜೆ.ರಾವ್ ನಿರ್ದೋಷಿ ಎಂದು ಸಾಬೀತಾಗಿತ್ತು. ಆದರೆ, ರಾವ್ ನಿರ್ದೋಷಿ ಆದರೂ, ಅಲ್ಲಿ ಮರುಚುನಾವಣೆ ನಡೆಯಬೇಕೆಂದು ಚಾವ್ಲಾ ಆಗ್ರಹಿಸಿದರು. ಮುಖ್ಯ ಚುನಾವಣಾ ಆಯುಕ್ತ ಮತ್ತು ಮತ್ತೊಬ್ಬ ಆಯುಕ್ತ ಎಸ್.ವೈ.ಖುರೇಶಿ ಒಂದು ಕಡೆ ಇರುವಾಗ ಚಾವ್ಲಾ ಭಿನ್ನಮತ ಎತ್ತಲು ನಿರ್ಧರಿಸಿದ್ದರು. ವಿಶೇಷವೆಂದರೆ, ಸೋನಿಯಾಗೆ ನೋಟಿಸ್ ನೀಡುವ ಪ್ರಕರಣದಂತೆಯೇ, ಇದನ್ನು ರಹಸ್ಯವಾಗಿರಿಸಬೇಕೆಂದು ಚಾವ್ಲಾ ಬಯಸಿದ್ದರು.

ಶಿಫಾರಸು ಪತ್ರದ ಹೆಚ್ಚಿನ ಭಾಗದಲ್ಲಿ ಚಾವ್ಲಾ ಅವರು ಆಯೋಗದ ನಿರ್ಧಾರವನ್ನು, ವಿಶೇಷವಾಗಿ ಕಾಂಗ್ರೆಸ್ ನಾಯಕರಿಗೆ, ಹೇಗೆ ಲೀಕ್ ಮಾಡುತ್ತಿದ್ದರು ಎಂಬ ಅಂಶಗಳೇ ಇವೆ. ಇನ್ನೊಂದು ಅಂಶವೆಂದರೆ, ಗುಜರಾತಿನಲ್ಲಿ ಮೂರು ಹಂತದ ಚುನಾವಣೆ ನಡೆಸಲು ಆಯೋಗ ನಿರ್ಧರಿಸಿದ್ದು ಕೇವಲ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇಬ್ಬರು ಆಯುಕ್ತರಿಗೆ ಮಾತ್ರವೇ ಗೊತ್ತಿತ್ತು. ಆದರೆ, ಕಾಂಗ್ರೆಸ್ ನೇತಾರನೊಬ್ಬ ಸಿಇಸಿ (ಮುಖ್ಯ ಚುನಾವಣಾ ಆಯುಕ್ತ)ಗೆ ಫೋನ್ ಮಾಡಿ,, ಎರಡು ಹಂತದಲ್ಲಿ ಚುನಾವಣೆ ಮಾಡಿ, 150 ಬೆಟಾಲಿಯನ್ ಹೆಚ್ಚುವರಿ ಕೇಂದ್ರೀಯ ಪಡೆಗಳನ್ನು ಒದಗಿಸಲು ಸಿದ್ಧ ಎಂದರಲ್ಲದೆ, ನಂತರ ಕೇಂದ್ರ ಗೃಹ ಕಾರ್ಯದರ್ಶಿಯೂ ಫೋನ್ ಮಾಡಿ ಇದೇ ಮನವಿ ಮಾಡಿಕೊಂಡಿದ್ದರು. ಆಗಲೂ ಗೋಪಾಲಸ್ವಾಮಿ ಅವರು ಚಾವ್ಲಾರನ್ನು ತರಾಟೆಗೆ ತೆಗೆದುಕೊಂಡರು. ಆದರೆ ನಾನೇನೂ ಮಾಡಿಲ್ಲ ಎಂದಷ್ಟೇ ಚಾವ್ಲಾ ಉತ್ತರವಾಗಿತ್ತು.

ಅದೇ ರೀತಿ, ಕಾಂಗ್ರೆಸ್‌ಗೆ ಸಂಬಂಧಪಟ್ಟ ಹಲವಾರು ಪ್ರಕರಣಗಳ ಫೈಲು ಮೊದಲು ಚಾವ್ಲಾ ಬಳಿಗೆ ಹೋದ ನಂತರ, ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ನಾಯಕರೊಬ್ಬರು ಸಿಇಸಿಯನ್ನು ಭೇಟಿ ಮಾಡಿ ಸಮಜಾಯಿಷಿ ನೀಡಲು ಬರುತ್ತಿದ್ದರು ಎಂಬ ಉಲ್ಲೇಖಗಳೂ ಇದರಲ್ಲಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫೆ.4ರಂದು ಎಸ್‌ಎಲ್‌ಟಿಪಿ ಬಂದ್‌ಗೆ ಕರೆ
ದಲಿತ ಪ್ರಧಾನಿಗೆ ಲಾಲು ಬೆಂಬಲ
ಚಾಂದ್ ಮೊಹಮ್ಮದ್ ವಿಶ್ವಾಸದ್ರೋಹಿ: ಫಿಜಾ
ಮಿಶನರಿ ಶಾಲೆಯಲ್ಲಿ ರಾಷ್ಟ್ರಗೀತೆಗೆ ಅಪಮಾನ: ಎಬಿವಿಪಿ ದಾಂಧಲೆ
'ಹೈಜಾಕ್ ನಾಟಕ': ಓರ್ವನ ಬಂಧನ, ಇಬ್ಬರ ಬಿಡುಗಡೆ
'ನೋ ಪಾಲಿಟಿಕ್ಸ್ ಗೋಪಾಲಸ್ವಾಮಿ': ಸಚಿವ ಭಾರದ್ವಾಜ್