ದ್ವೀಪ ರಾಷ್ಟ್ರವಾದ ಶ್ರೀಲಂಕಾದಲ್ಲಿ ತಮಿಳರ ಮೇಲೆ ನಡೆಯುತ್ತಿರುವ ದಾಳಿ ಹಾಗೂ ದೀರ್ಘ ಕಾಲದ ವಿವಾದಕ್ಕೆ ಶಾಶ್ವತವಾದ ಪರಿಹಾರವನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಕೇಂದ್ರದ ಯುಪಿಎ ಸರ್ಕಾರ ಶೀಘ್ರವೇ ಶಾಂತಿ ಸಂಧಾನ ಮಾತುಕತೆಗೆ ಮುಂದಾಗಬೇಕೆಂದು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಮಂಗಳವಾರ ಆಗ್ರಹಿಸಿದೆ.
ಮಂಗಳವಾರ ಮುಖ್ಯಮಂತ್ರಿ ಕರುಣಾನಿಧಿ ಅವರು ಡಿಎಂಕೆ ಕಾರ್ಯಕಾರಿ ಸಮಿತಿಯಲ್ಲಿ ಪಾಲ್ಗೊಂಡು, ಶ್ರೀಲಂಕಾದಲ್ಲಿ ಯುದ್ಧ ವಿರಾಮಕ್ಕೆ ಭಾರತ ಮುಂದಾಗಬೇಕೆಂದು ಒತ್ತಾಯಿಸಿದರು.
ಶ್ರೀಲಂಕಾದಲ್ಲಿ ಯುದ್ದ ವಿರಾಮ ಕುರಿತಂತೆ ಮುಂದೆ ಕೈಗೊಳ್ಳಬಹುದಾದ ನಿರ್ಧಾರದ ಕುರಿತು ಡಿಎಂಕೆಯ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ಸಭೆಯಲ್ಲಿ ಡಿಎಂಕೆ ಪಕ್ಷವು, ಶ್ರೀಲಂಕಾದಲ್ಲಿ ನಡೆಯುತ್ತಿರುವ ಸೇವೆ ಮತ್ತು ಎಲ್‌ಟಿಟಿಇ ನಡುವೆ ನಡುವೆ ನಡೆಯುತ್ತಿರುವ ಯುದ್ದ ವಿರಾಮಕ್ಕೆ ಒತ್ತಾಯಿಸಿತು.
ಈ ನಿಟ್ಟಿನಲ್ಲಿ ಡಿಎಂಕೆ ನಿಲುವನ್ನು ಸಾರ್ವಜನಿಕರು ಬೆಂಬಲಿಸುವ ನಿಟ್ಟಿನಲ್ಲಿ, ಫೆ.7ರಿಂದ 9ರವರೆಗೆ ಸಾರ್ವಜನಿಕ ಸಭೆ ಹಾಗೂ ರಾಲಿಗಳನ್ನು ರಾಜ್ಯಾದ್ಯಂತ ನಡೆಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. |