ನಮ್ಮನ್ನು ದುರ್ಬಲಗೊಳಿಸಲು ನೆರೆಯ ರಾಷ್ಟ್ರ ಯತ್ನಿಸುತ್ತಿರುವುದಾಗಿ ಯುಪಿಎ ವರಿಷ್ಠೆ ಸೋನಿಯಾಗಾಂಧಿ ಅವರು ಪಾಕಿಸ್ತಾನದ ಹೆಸರನ್ನು ಹೇಳದೆ ತರಾಟೆಗೆ ತೆಗೆದುಕೊಂಡ ಅವರು, ಪಾಕ್ ವಿರುದ್ಧ ಕಿಡಿ ಕಾರಿದ್ದಾರೆ.
ನೆರೆಯ ದೇಶ ಭಾರತದ ಐಕ್ಯತೆಯ ನಾಶಕ್ಕೆ ಹೊರಟಿದೆ ಎಂದ ಅವರು, ಆದರೆ ಅದಕ್ಕೆ ಇನ್ನೂ ತಿಳಿದಿಲ್ಲ ತಕ್ಕ ಉತ್ತರ ನೀಡಲು ಭಾರತ ಸಮರ್ಥವಾಗಿದೆ ಎಂಬುದನ್ನು ಮನಗಾಣಬೇಕಿದೆ ಎಂದಿದ್ದಾರೆ.
ಭಾರತದಲ್ಲಿ ಹಲವು ಧರ್ಮ, ಹಲವು ಸಮುದಾಯಗಳು ಜನರು ಐಕ್ಯತೆಯಿಂದ ಬಾಳುವ ಮೂಲಕ ಪ್ರಪಂಚದಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಂಡಿದೆ. ಆದರೆ ನೆರೆ ರಾಷ್ಟ್ರ ನಮ್ಮನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಸಾರ್ವಜನಿಕ ರಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತ ಹರಿಹಾಯ್ದರು.
ಭಯೋತ್ಪಾದನೆ ಎನ್ನುವುದು ದೇಶಕ್ಕೆ ದೊಡ್ಡ ಸವಾಲಾಗಿದೆ ಎಂದು ಸೋನಿಯಾ, ನಾವು ಭಯೋತ್ಪಾದನೆಯನ್ನು ಮಟ್ಟಹಾಕುವುದಾಗಿಯೂ ಈ ಸಂದರ್ಭದಲ್ಲಿ ತಿಳಿಸಿದರು. |