ಹಗರಣಪೀಡಿತ ಸತ್ಯಂ ಕಂಪ್ಯೂಟರ್ ಸರ್ವಿಸಸ್‌ಗೆ ಗುರುವಾರ ಕೊನೆಗೂ ಹೊಸ ಸಿಇಒ ನೇಮಕಗೊಂಡಿದ್ದಾರೆ. ಸತ್ಯಂನ ಜಾಗತಿಕ ವ್ಯವಹಾರ ವಿಭಾಗದ ಮುಖ್ಯಸ್ಥರಾಗಿದ್ದ, ಕಳೆದ 15 ವರ್ಷಗಳಿಂದಲೂ ಈ ಐಟಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎ.ಎಸ್.ಮೂರ್ತಿ ಅವರನ್ನು ನೂತನ ಕಾರ್ಯ ನಿರ್ವಹಣಾಧಿಕಾರಿಯಾಗಿ ನೇಮಿಸಲಾಗಿದೆ.
ಅಂತೆಯೇ ಪಾರ್ಥೊ ಎಸ್. ದತ್ತಾ ಮತ್ತು ಹೋಮಿ ಖುಸ್ರೋಖಾನ್ ಅವರನ್ನು ವಿಶೇಷ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಹೈದರಾಬಾದಿನಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಸತ್ಯಂ ಮಂಡಳಿಯ ಸಭೆಯ ಬಳಿಕ ಗುರುವಾರ ಈ ಆಯ್ಕೆ ಪ್ರಕ್ರಿಯೆ ಅಂತಿಮಗೊಳಿಸಲಾಗಿದೆ ಎಂದು ಮಂಡಳಿಯ ದೀಪಕ್ ಪಾರೇಖ್ ತಿಳಿಸಿದ್ದಾರೆ.
ಈ ಮಧ್ಯೆ, 7800 ಕೋಟಿ ರೂ.ಗಳ ಸತ್ಯಂ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆಗಳಿವೆ. |