ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದಾಳಿ-ಪಾಕ್‌ನಿಂದ ಅಧಿಕೃತ ಮಾಹಿತಿ ಬಂದಿಲ್ಲ: ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿ-ಪಾಕ್‌ನಿಂದ ಅಧಿಕೃತ ಮಾಹಿತಿ ಬಂದಿಲ್ಲ: ಚಿದಂಬರಂ
ಮುಂಬೈ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

ದಾಳಿ ಕುರಿತಂತೆ ನೀಡಿರುವ ಹೇಳಿಕೆಯಲ್ಲಿ ಯಾವುದೇ ಗೊಂಲದಲ ಇಲ್ಲ. ವಿದೇಶಾಂಗ ಸಚಿವರಾದ ಪ್ರಣವ್ ಮುಖರ್ಜಿಯಾಗಲಿ ಅಥವಾ ನಾನಾಗಲಿ ಪಾಕಿಸ್ತಾನದಿಂದ ಯಾವುದೇ ಮಾಹಿತಿಯನ್ನು ಪಡೆದಿಲ್ಲ ಎಂದು ಗೃಹಸಚಿವ ಪಿ.ಚಿದಂಬರಂ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.

ಮುಂಬೈ ದಾಳಿ ಕುರಿತಂತೆ ಪಾಕಿಸ್ತಾನ ಕೆಲವೊಂದು ಸಂದೇಶಗಳನ್ನು ವ್ಯಕ್ತಪಡಿಸಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರು ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ ಸರ್ಕಾರದಲ್ಲಿಯೇ ಯಾವುದಾದರು ಗೊಂದಲ ಇದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಅವರು ಮಾತನಾಡಿದರು.

ತನಿಖೆ ನಡೆಸುತ್ತಿದ್ದೇವೆ, ತನಿಖೆ ಪೂರ್ಣಗೊಂಡಿದೆ ಎಂದು ಪಾಕಿಸ್ತಾನದ ಮಾಧ್ಯಮಗಳ ವರದಿ ತಿಳಿಸುತ್ತಿವೆಯಾದರು ಕೂಡ, ಪಾಕ್‌ನಿಂದ ಅಧಿಕೃತವಾದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಸಿಇಒ ಆಗಿ ಎ.ಎಸ್.ಮೂರ್ತಿ ನೇಮಕ
ಬಿಜೆಪಿ ಅಧಿಕಾರಕ್ಕೆ ಬಂದರೆ ಭಯೋತ್ಪಾದನೆ ದಮನ: ಆಡ್ವಾಣಿ
ಸತ್ಯಂ ವಂಚನೆ-ಮತ್ತಷ್ಟು ಬಂಧನ ಸಾಧ್ಯತೆ: ಪೊಲೀಸ್
ಮಹಾರಾಷ್ಟ್ರ ಡಿಜಿಪಿ ರಾಯ್ ಆಯ್ಕೆ ಅಸಿಂಧು: ಹೈಕೋರ್ಟ್
ನಿಮ್ಮ ಕ್ಷಮೆ ಯಾರಿಗೆ ಬೇಕು?: ಮುಸ್ಲಿಮ್ ಉಲೇಮಾ
ವಾಜಪೇಯಿ ಆರೋಗ್ಯದಲ್ಲಿ ಸುಧಾರಣೆ