ಮಂಗಳೂರು ಪಬ್ ಮೇಲಿನ ದಾಳಿ ಕುರಿತು ರಾಷ್ಟ್ರೀಯ ಮಹಿಳಾ ಆಯೋಗದ ಏಕ ಸದಸ್ಯೆಯಾದ ನಿರ್ಮಲಾ ವೆಂಕಟೇಶನ್ ಅವರು ನೀಡಿದ ವರದಿಯನ್ನು ಸ್ವೀಕರಿಸದಿರಲು ಎನ್‌ಸಿಡಬ್ಲ್ಯು ಶುಕ್ರವಾರ ನಿರ್ಧಾರ ಕೈಗೊಂಡಿದೆ.
ಮಂಗಳೂರಿನ ಎಮ್ನೇಶಿಯ ಪಬ್ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿದ ಒಂದು ವಾರದ ಬಳಿಕ ನಿರ್ಮಲಾ ವೆಂಕಟೇಶನ್ ಭೇಟಿ ನೀಡಿ, ಸೂಕ್ತವಾದ ರಕ್ಷಣಾ ವ್ಯವಸ್ಥೆ ಇಲ್ಲದಿರುವುದೇ ಘಟನೆಗೆ ಕಾರಣ ಎಂದು ವರದಿ ನೀಡಿದ್ದರು.
ಆ ನಿಟ್ಟಿನಲ್ಲಿ ಸಮರ್ಪಕವಾದ ವರದಿಯನ್ನು ನೀಡದೆ ಇರುವುದರಿಂದ ನಿರ್ಮಲಾ ಅವರು ನೀಡಿರುವ ವರದಿಯನ್ನು ತಿರಸ್ಕರಿಸಲು ಇಂದು ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು ಎಂದು ಆಯೋಗದ ಅಧ್ಯಕ್ಷ ಗಿರಿಜಾ ವ್ಯಾಸ್ ತಿಳಿಸಿದ್ದಾರೆ.
ಅಲ್ಲದೇ ನ್ಯಾಷನಲ್ ಕಮೀಷನ್ ಆಫ್ ವುಮೆನ್ ವತಿಯಿಂದ ಮಂಗಳೂರಿಗೆ ಮತ್ತೆ ತನಿಖೆಗಾಗಿ ಹೊಸ ತಂಡವನ್ನು ಕಳುಹಿಸುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ದಿ ಸಚಿವಾಲಯದ ವತಿಯಿಂದ ಸ್ವತಂತ್ರವಾದ ಸತ್ಯಶೋಧನಾ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಂಗಳೂರು ಪಬ್ ದಾಳಿಯ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ನೀಡಿದ ವರದಿಗೆ ಅಸಮಾಧಾನ ಪಟ್ಟಿಕೊಳ್ಳಲು ಈಕೆ ಯಾರು ?ಎಂದು ಸಾರ್ವಜನಿಕವಾಗಿ ಕೆಂಡಮಂಡಲರಾಗಿದ್ದ ನಿರ್ಮಲಾ ವೆಂಕಟೇಶ್‌ಗೆ ಕೇಂದ್ರ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧುರಿ ಷೋಕಾಸ್ ನೋಟಸ್ ಜಾರಿ ಮಾಡಿದ್ದಾರೆ. |