ಮುಂಬೈ ಮೇಲಿನ ನಡೆದ ಭಯೋತ್ಪಾದನಾ ದಾಳಿಯಲ್ಲಿ ಬಾಂಗ್ಲಾದೇಶದ ಹುಜಿ ಉಗ್ರಗಾಮಿ ಸಂಘಟನೆ ಶಾಮೀಲಾಗಿದೆ ಎಂದು ಪಾಕಿಸ್ತಾನದ ತಂತ್ರಗಾರಿಕೆಯ ಮಾಹಿತಿ ನೀಡಲು ಸಿದ್ದತೆ ನಡೆಸಿದೆ ಎಂಬ ವರದಿಯನ್ನು ಮಹಾರಾಷ್ಟ್ರ ಗೃಹ ಸಚಿವ ಜಯಂತ್ ಪಾಟೀಲ್ ತಿರಸ್ಕರಿಸಿದ್ದಾರೆ.
ಇದೊಂದು ಅಸಂಬದ್ಧ ಹೇಳಿಕೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಭಾರತ, ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿರುವುದು ಲಷ್ಕರ್ ಇ ತೊಯ್ಬಾ ಎಂದು ಹೇಳಿದೆ.
ದಾಳಿಯ ಸಂದರ್ಭದಲ್ಲಿ ಜೀವಂತವಾಗಿ ಸೆರೆಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಕಸಬ್‌ನೇ ತಾನು ಪಾಕಿಸ್ತಾನಿ ಎಂಬುದನ್ನು ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ತನಿಖೆಯ ವೇಳೆ ಲಷ್ಕರ್ ಇ ತೊಯ್ಬಾ ಸಂಘಟನೆಯ ಅನೇಕರನ್ನು ಹೆಸರನ್ನೂ ಬಾಯ್ಬಿಟ್ಟಿದ್ದಾನೆ. ಈ ದಾಳಿಯ ಸಂಚು ರೂಪುಗೊಂಡಿರುವುದು ಕೂಡ ಪಾಕ್ ನೆಲದಲ್ಲಿ ಎಂಬುದನ್ನೂ ತಿಳಿಸಿದ್ದ ಎಂದು ಪಾಟೀಲ್ ವಿವರಿಸಿದ್ದಾರೆ.
ಕಸಬ್ ಎಂ.ವಿ.ಕುಬೇರ್ ಬೋಟ್ ಮೂಲಕವೇ ಆಗಮಿಸಿರುವುದನ್ನೂ ಕೂಡ ಗುರುವಾರ ವಿಧಿವಿಜ್ಞಾನ ವರದಿ ಖಚಿತಪಡಿಸಿದೆ. ಡಿಎನ್ಎ ಸ್ಯಾಂಪಲ್ ಕೂಡ ಹೊಂದಾಣಿಕೆಯಾಗಿತ್ತು. |