ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೇಹಸ್ಥಿತಿ ಶುಕ್ರವಾರದಂದು ಮತ್ತಷ್ಟು ಹದಗೆಟ್ಟಿದ್ದು, ಏಮ್ಸ್ ಆಸ್ಪತ್ರೆಯ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿದೆ.ಶ್ವಾಸಕೋಶದ ಸೋಂಕು ಉಲ್ಭಣಗೊಂಡ ಪರಿಣಾಮ ಇಂದು ಮಧ್ನಾಹ್ನ ಅವರನ್ನು (ಮೆಕ್ಯಾನಿಕಲ್ ವೆಂಟಿಲೇಷನ್‌ನಲ್ಲಿ)ತುರ್ತುನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಏಮ್ಸ್‌ನ ವೈದ್ಯಾಧಿಕಾರಿ ಡಾ.ಸಂಪತ್ ಕುಮಾರ್ ತಿಳಿಸಿದ್ದಾರೆ.ವಾಜಪೇಯಿ ಅವರ ರಕ್ತದೊತ್ತಡ, ಲಿವರ್ ಹಾಗೂ ಕಿಡ್ನಿಯ ಆರೋಗ್ಯ ಸ್ಥಿತಿ ಉತ್ತಮವಾಗಿರುವುದಾಗಿ ವೈದ್ಯರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಶ್ವಾಸಕೋಶದ ಸೋಂಕು ಉಲ್ಬಣಗೊಂಡ ಪರಿಣಾಮ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದು, ಅವರ ದೇಹಸ್ಥಿತಿ ಮತ್ತಷ್ಟು ಹದಗೆಟ್ಟಿರುವುದಾಗಿ ಹೇಳಲಾಗುತ್ತಿದೆ. ಆದರೆ ಈ ವಿಷಯವನ್ನು ವೈದ್ಯರಾಗಲಿ, ಪಕ್ಷದ ಮೂಲಗಳು ಖಚಿತಪಡಿಸುತ್ತಿಲ್ಲ.84 ರ ಹರೆಯದ ವಾಜಪೇಯಿ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದೀಗ ಅವರ ಆರೋಗ್ಯದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. |