ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಅವರಿಗೆ ಕೃತಕ ಉಸಿರಾಟ ಮುಂದುವರಿಸಲಾಗಿದೆ.
ಶ್ವಾಸಕೋಶಕ ಸೋಂಕಿನಿಂದ ಬಳಲುತ್ತಿರುವ ಅವರು ಇಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ವಾಜಪೇಯಿ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ.
ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೂ, ಸ್ಥಿರವಾಗಿದೆ ಎಂದು ಏಮ್ಸ್ ಸೂಪರಿಂಟೆಂಡೆಂಟ್ ಡಿ.ಕೆ.ಶರ್ಮಾ ಅವರು ಶನಿವಾರ ವಿವರಿಸಿದ್ದಾರೆ. 85ವರ್ಷ ವಯಸ್ಸಾಗಿರುವ ವಾಜಪೇಯಿ ಅವರನ್ನು ತೀವ್ರ ನಿಗಾ ಘಟಕದ್ಲಿ ಅವರನ್ನು ಇರಿಸಲಾಗಿದೆ.
ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ, ಬಿಜೆಪಿಯ ಎಲ್.ಕೆ.ಆಡ್ವಾಣಿ, ಸ್ಪೀಕರ್ ಸೋಮನಾಥ್ ಚಟರ್ಜಿ ಅವರು ಶನಿವಾರ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯವನ್ನು ವಿಚಾರಿಸಿದರು. |