ಶ್ರೀಲಂಕಾ ಮಿಲಿಟರಿ ಮತ್ತು ತಮಿಳು ವ್ಯಾಘ್ರಗಳ ನಡುವೆ ಕದನದಲ್ಲಿ ಸಿಲುಕಿರುವ ಸಾವಿರಾರು ತಮಿಳು ನಾಗರಿಕರ ಸುರಕ್ಷತೆಗೆ ಗಮನ ಕೊಡಿ ಎಂದು ಭಾರತ ಭಾನುವಾರ ಶ್ರೀಲಂಕಾ ಸರ್ಕಾರಕ್ಕೆ ಆಗ್ರಹಿಸಿದೆ. ನವದೆಹಲಿಯಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ.ತಮಿಳು ಈಳಂ ವ್ಯಾಘ್ರ ಪಡೆಯ ಬಗ್ಗೆ ತಮಗೆ ಸ್ವಲ್ಪವೂ ಕನಿಕರವಿಲ್ಲ ಎಂದು ನುಡಿದರು.
ಆದರೆ ಎಲ್‌ಟಿಟಿಇ ಮತ್ತು ಶ್ರೀಲಂಕಾ ಪಡೆಗಳ ಹೋರಾಟದ ನಡುವೆ ಸಿಕ್ಕಿಬಿದ್ದಿರುವ 2 ಲಕ್ಷ ತಮಿಳು ಜನಾಂಗೀಯರಿಗೆ ಆಶ್ರಯ, ಆಹಾರ ಮತ್ತು ರಕ್ಷಣೆ ನೀಡುವಂತೆ ಅವರು ಒತ್ತಾಯಿಸಿದರು. ಎಲ್‌ಟಿಟಿಇ ಉಗ್ರರನ್ನು 200 ಕಿಮೀ ಸುತ್ತಳತೆಯಲ್ಲಿ ಶ್ರೀಲಂಕಾ ಸೇನಾ ಪಡೆಗಳು ತಳ್ಳಿರುವ ಮುಲ್ಲೈತಿವುನಲ್ಲಿ ಕೇಂದ್ರೀಕೃತರಾದ ತಮಿಳು ಜನಾಂಗದ ಪುರುಷರು, ಮಹಿಳೆಯರು ಮತ್ತು ಮಕ್ಕಳ ಸಮೂಹ ಉಲ್ಲೇಖಿಸಿ ಮುಖರ್ಜಿ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಕದನವಿರಾಮ ಘೋಷಿಸುವಂತೆ ಸಾಮೂಹಿಕ ಪ್ರತಿಭಟನೆಗೆ ಸಾಕ್ಷಿಯಾದ ತಮಿಳುನಾಡಿನ ರಾಜಕಾರಣಿಗಳು ಎಲ್‌ಟಿಟಿಇ ಮತ್ತು ತಮಿಳು ನಾಗರಿಕರ ನಡುವೆ ವ್ಯತ್ಯಾಸವನ್ನು ಗುರುತಿಸಬೇಕೆಂದು ಅವರು ಮನವಿ ಮಾಡಿದರು.ಪ್ರಾಂತ್ಯಗಳಿಗೆ ಅಧಿಕಾರ ವಿಕೇಂದ್ರೀಕರಣದ 1987ರ ಒಪ್ಪಂದದ ನಿಯಮಗಳನ್ನು ಅನುಷ್ಠಾನಕ್ಕೆ ತರುವಂತೆ ಸಚಿವರು ಕೊಲಂಬೊಗೆ ಸೂಚಿಸಿದರು.
|