ಮಂಗಳೂರಿನಲ್ಲಿ ಮಹಿಳೆಯರ ಮೇಲೆ ದಾಳಿಗಳನ್ನು ಕುರಿತು ಬೇಜಾವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ.
'ಅವರು ಇಲ್ಲಿಗೆ ಆಗಮಿಸಿ ಸತ್ಯಾಂಶಗಳನ್ನು ಖಚಿತಪಡಿಸಿಕೊಳ್ಳಲಿ. ಪಬ್ ಮೇಲೆ ದಾಳಿ ಕುರಿತಂತೆ ತನಿಖೆ ನಡೆಸಲಾಗುತ್ತಿದ್ದು, ಸತ್ಯಾಂಶ ಹೊರಬರುತ್ತದೆ. ಅಲ್ಲಿವರೆಗೆ ರಾಜ್ಯಸರ್ಕಾರವನ್ನು ಟೀಕಿಸುವುದಕ್ಕೆ ತಡೆವಿಧಿಸಲಿ' ಎಂದು ಯಡಿಯೂರಪ್ಪ ಸಮಾರಂಭವೊಂದರ ನೇಪಥ್ಯದಲ್ಲಿ ಹೇಳಿದರು.
'ಕೇರಳ ಶಾಸಕರ ಪುತ್ರಿ ಮತ್ತು ಅವರ ಗೆಳೆಯನನ್ನು ಥಳಿಸಿದ ಘಟನೆಗೆ ಸಂಬಂಧಿಸಿದಂತೆ 5ರಿಂದ 6 ಜನರನ್ನು ಬಂಧಿಸಲಾಗಿದ್ದು, ಬಹುತೇಕ ಮಂದಿ ರಾಜ್ಯಕ್ಕೆ ಸೇರಿದವರಲ್ಲ. ಬಿಜೆಪಿ ಅಥವಾ ಶ್ರೀರಾಮಸೇನೆಗೆ ಸೇರಿದವರೂ ಅಲ್ಲ. ತನಿಖೆ ಮುಂದುವರಿದಿದ್ದು ಅಲ್ಲಿವರೆಗೆ ಸರ್ಕಾರದ ವಿರುದ್ಧ ಟೀಕೆಯನ್ನು ನಿಲ್ಲಿಸಲಿ' ಎಂದು ಕಟುವಾದ ಮಾತುಗಳಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ.
|