ಹುಣ್ಣಿಮೆಯದ ದಿನವಾದ ಸೋಮವಾರ ಅರ್ಧ ಚಂದ್ರಗ್ರಹಣ ನಡೆಯಲಿದ್ದು, ದೇಶಾದ್ಯಂತ ಇದನ್ನು ನೋಡಬಹುದಾಗಿದೆ. ಸಾಯಂಕಾಲ 6.08ಕ್ಕೆ ಆರಂಭವಾಗುವ ಈ ಗ್ರಹಣವು ರಾತ್ರಿ 10.08ರ ವೇಳೆಗೆ ಕೊನೆಗೊಳ್ಳಲಿದೆ.
ಭಾರತ ಮಾತ್ರವಲ್ಲದೆ, ಅಲಸ್ಕಾ, ಆಸ್ಟ್ರೇಲಿಯಾ, ಪೂರ್ವ ಏಷ್ಯಾ, ಹವಾಯಿ, ನ್ಯೂಜಿಲೆಂಡ್ ಮತ್ತು ಕೆನಡಾ ಹಾಗೂ ಅಮೆರಿಕದ ಪಶ್ಚಿಮ ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ.
ಈ ಅರೆನೆರಳು-ಅರೆಬೆಳಕಿನಾಟದಲ್ಲಿ ಚಂದ್ರನ ಮೇಲ್ಮೈ ಪೂರ್ಣಪ್ರಮಾಣದಲ್ಲಿ ಕಪ್ಪಿಡುವುದಿಲ್ಲ. |