ಮುಂಬೈ ವಿಮಾನ ನಿಲ್ದಾಣದಲ್ಲಿ ಹಠಾತ್ತನೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಹೆಲಿಕಾಪ್ಟರ್ ಇಳಿದ ಪರಿಣಾಮ ಭಾರೀ ಅನಾಹುತ ತಪ್ಪಿದ ಘಟನೆ ಸೋಮವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈನಿಂದ ದೆಹಲಿಗೆ ಹೊರಟಿದ್ದ 148ಪ್ರಯಾಣಿಕರನ್ನೊಳಗೊಂಡ ಇಂಡಿಯನ್ ಏರ್ಲೈನ್ಸ್ (866) ನಿಲ್ದಾಣದಿಂದ ಟೆಕ್ಆಫ್ ತೆಗೆದುಕೊಳ್ಳಬೇಕೆಂಬಷ್ಟರಲ್ಲಿ ಹಠಾತ್ತನೆ ಹೆಲಿಕಾಪ್ಟರ್ವೊಂದು ರನ್ವೇ ಮೇಲೆ ಇಳಿಯುತ್ತಿರುವುದನ್ನು ಗಮನಿಸಿದ ಪೈಲಟ್ ಅವರ ಸಮಯಪ್ರಜ್ಞೆಯಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಆದರೆ ಘಟನೆ ನಡೆಯುವ ಸಂದರ್ಭದಲ್ಲಿ ಹೆಲಿಕಾಪ್ಟರ್ನಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಇದ್ದಿರಲಿಲ್ಲ ಎಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಏರ್ಲೈನ್ಸ್ನಲ್ಲಿ 148 ಪ್ರಯಾಣಿಕರು ಹಾಗೂ ಸಿಬ್ಬಂದಿಗಳಿದ್ದು ಎಲ್ಲರೂ ಸುರಕ್ಷಿತವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. |