ಕರಾವಳಿ ಪ್ರದೇಶದಲ್ಲಿನ ಸಂಭಾವ್ಯ ಭಯೋತ್ಪಾದನಾ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಕರಾವಳಿ ಕಮಾಂಡೋ ಪಡೆಯನ್ನು ಶೀಘ್ರವೇ ರೂಪಿಸಲಾಗುವುದು ಎಂದು ಕೇಂದ್ರ ಗೃಹಸಚಿವ ಪಿ.ಚಿದಂಬರಂ ಸೋಮವಾರ ತಿಳಿಸಿದ್ದಾರೆ.
ಉಗ್ರರ ದಾಳಿಯನ್ನು ನಿಗ್ರಹಿಸುವ ನೆಲೆಯಲ್ಲಿ ನೌಕಾ ಮತ್ತು ಕರಾವಳಿ ಪಡೆಯನ್ನು ಮತ್ತಷ್ಟು ಸಶಕ್ತಗೊಳಿಸಿ ಕರಾವಳಿ ಕಮಾಂಡೋ ಪಡೆಯನ್ನು ನಿಯೋಜಿಸಲಾಗುವುದು ಎಂದರು.
ಭಯೋತ್ಪಾದಕರು ಕರಾವಳಿಯನ್ನು ಸಂಚಾರ ವ್ಯವವಸ್ಥೆಗೆ ಬಳಸಿಕೊಂಡಿರುವುದು ಈಗಾಗಲೇ ಮುಂಬೈ ದಾಳಿಯ ಸಂದರ್ಭದಲ್ಲಿ ಸಾಬೀತಾಗಿದೆ. ಆ ನೆಲೆಯಲ್ಲಿ ಕರಾವಳಿ ಕಮಾಂಡೋ ಪಡೆ ಜಾರಿಗೆ ಬರಲಿದೆ ಎಂದು ಇಲ್ಲಿನ ನಿಂದಾಕಾರಾ ಪ್ರದೇಶದಲ್ಲಿ ಕರಾವಳಿ ಪ್ರದೇಶದ ಪ್ರಥಮ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇನ್ನು ಕೆಲವೇ ದಿನಗಳಲ್ಲಿ ಕರಾವಳಿ ಕಮಾಂಡೋ ಪಡೆಯನ್ನು ಅಸ್ತಿತ್ವಕ್ಕೆ ತರಲಾಗುವುದು ಎಂದರು. ಮುಂಬೈ ದಾಳಿಯ ನಂತರ ಭಯೋತ್ಪಾದಕರ ದಾಳಿ ಪರಿ ನಾನಾ ವಿಧದ್ದಾಗಿರುತ್ತದೆ ಎಂಬ ಅಪಾಯ ಮನಗಂಡಿದ್ದು,ಶತ್ರುಗಳನ್ನು ಬಗ್ಗು ಬಡಿಯುವಲ್ಲಿ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ ಎಂದರು. |