ಮುಂಬೈ ವಿಧ್ವಂಸಕ ದಾಳಿ ಕುರಿತು ತನಿಖೆ ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ದಳದ ಮೂವರು ಸದಸ್ಯರ ತಂಡವು ದಾಳಿಗೆ ಸಂಬಂಧಿಸಿದಂತೆ ಎಫ್‌ಬಿಐನಿಂದ ವಿವರ ಪಡೆಯುವ ಸಲುವಾಗಿ ಮಂಗಳವಾರ ಅಮೆರಿಕಕ್ಕೆ ಪ್ರಯಾಣ ಬೆಳೆಸಿದೆ.
ಹೆಚ್ಚುವರಿ ಪೊಲೀಸ್ ಆಯುಕ್ತ ದೇವೆನ್ ಭಾರ್ತಿ ಅವರನ್ನೊಳಗೊಂಡ ಮೂವರ ತಂಡ ಅಮೆರಿಕಕ್ಕೆ ಹೊರಟಿದೆ ಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ದಾಳಿಗೆ ಸಂಬಂಧಿಸಿದಂತೆ ಎಫ್‌ಬಿಐ ಅಧಿಕಾರಿಗಳು ನಡೆಸಿರುವ ತನಿಖೆಯ ವಿನಿಮಯ ಮಾಡಿಕೊಳ್ಳುವುದು ಮತ್ತು ತನಿಖೆಗೆ ಅವರ ನೆರವು ಕೋರಲಾಗುವುದು ಎಂದು ಅವರು ಹೇಳಿದರು.
ಎಫ್‌ಬಿಐ ಅಧಿಕಾರಿಗಳು ಮುಂಬೈ ದಾಳಿ ಸಂದರ್ಭದಲ್ಲಿ ಬಂಧಿತನಾಗಿರುವ ಮೊಹಮದ್ ಅಜ್ಮಲ್ ಅಮಿರ್ ಕಸಬ್‌ನ ವಿಚಾರಣೆ ನಡೆಸುವ ವೇಳೆ ಸಾಕ್ಷಿಗಳಾಗಿ ಹಾಜರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. |