ಪಾಕಿಸ್ತಾನದ ಮೇಲೆ ದಾಳಿ ನಡೆಸುವುದಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ಅಲ್ ಖಾಯಿದಾ ಸಂಘಟನೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ತಾವು ಯಾವುದೇ ರೀತಿಯ ಬೆದರಿಗೆಗಳಿಗೆ ಜಗ್ಗುವುದಿಲ್ಲ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.ಯಾವುದೇ ರೀತಿಯ ಬೆದರಿಕೆಗಳು ಬಂದರೂ ಅವುಗಳನ್ನು ಮೆಟ್ಟಿ ನಿಲ್ಲಲು ತಮ್ಮ ಸೇನಾ ಪಡೆ ಸನ್ನದ್ಧವಾಗಿದೆ ಎಂದು ಸಮಾರಂಭವೊಂದರಲ್ಲಿ ಮಾತನಾಡುತ್ತ ಎಚ್ಚರಿಕೆ ನೀಡಿದರು.ಪಾಕ್ ಮೇಲೆ ಭಾರತ ದಾಳಿ ಮಾಡುವುದಾದರೆ ಮುಂಬೈಯಲ್ಲಿ ಸಂಭವಿಸಿದಂತಹ ಉಗ್ರರ ದಾಳಿಯನ್ನು ಇನ್ನು ಮುಂದೆ ಭಾರತ ಎದುರಿಸಬೇಕಾಗಿ ಬರುವುದು ಎಂಬ ಅಲ್ ಖಾಯಿದಾ ಕಮಾಂಡರ್‌ನ ಬೆದರಿಕೆಯ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದರು. |