ದೇಶದಲ್ಲಿನ ಭಯೋತ್ಪಾದನೆ ಮತ್ತು ನಕ್ಸಲೀಯರ ಅಟ್ಟಹಾಸವನ್ನು ತಡೆಯಲು ಸರ್ಕಾರ ತೀವ್ರ ಹೋರಾಟ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಚಿದಂಬರಂ ಭರವಸೆ ನೀಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಖ್ ಚವಾಣ್ ಹಾಗೂ ಇತರ ಹಿರಿಯ ನಾಯಕರೊಂದಿಗೆ ಸುರಕ್ಷತಾ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಅವರು, ಭಾರತವು ಮುಂಬೈ ದಾಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದ್ದು ಇದೀಗ ಭಾರತ ಪಾಕಿಸ್ತಾನದ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿರುವುದಾಗಿ ಹೇಳಿದರು.
ಅಲ್ಲದೇ ಮುಂಬೈ ದಾಳಿಯ ಸಂಚಿನಲ್ಲಿ ಪಾಕಿಸ್ತಾನದೊಂದಿಗೆ ಕೈಜೋಡಿಸಿರುವ ಬಾಂಗ್ಲಾದೇಶದ ಕೃತ್ಯವನ್ನು ಚಿದಂಬರಂ ತೀವ್ರವಾಗಿ ಖಂಡಿಸಿದರು. |