ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ ಕಂಪೆನಿಯ ವಿರೋಧದ ನಂತರ ಭಾರತದ ಭೋಪಾಲ್‌ನಲ್ಲಿ 1984ರಲ್ಲಿ ಸಂಭವಿಸಿದ ವಿಷಾನಿಲ ದುರಂತ ಪ್ರಕರಣಕ್ಕೆ ಸಂಬಂಧಿಸಿದ ದೀರ್ಘಾವಧಿಯ ಕಾನೂನು ಸಮರದ ಬಗ್ಗೆ ಮಧ್ಯಸ್ಥಿಕೆ ವಹಿಸಬೇಕೆಂಬ ಕೋರಿಕೆಯನ್ನು ಅಮೆರಿಕದ ನ್ಯಾಯಾಲಯ ತಿರಸ್ಕರಿಸಿದೆ.
1984ರಲ್ಲಿ ಯೂನಿಯನ್ ಕಾರ್ಬೈಡ್ ಕಂಪೆನಿ ಕೀಟನಾಶಕ ಅನಿಲ ಹೊರಸೂಸಿದ ಪರಿಣಾಮ ಇಂದಿಗೂ ನೀರು ಮತ್ತು ಮಣ್ಣು ವಿಷಯುಕ್ತವಾಗಿದೆ ಎಂದು ಆರೋಪಿಸಿ ಕಂಪೆನಿ ವಿರುದ್ದ ಭೋಪಾಲ್ ನಿವಾಸಿಗಳು ಮೊಕದ್ದಮೆ ಹೂಡಿದ್ದರು. ಪ್ರಸ್ತುತ ಕಂಪೆನಿ ಬಾಗಿಲು ಮುಚ್ಚಿದೆ. ಆದರೆ ಅದಕ್ಕೆ ನಾವು ಹೊಣೆಯಲ್ಲ ಎಂದಿರುವ ಕಂಪೆನಿ, ಭಾರತದ ಅಧಿಕಾರಿಗಳು ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಸಮರ್ಥನೆ ನೀಡಿದೆ.
ಅಮೆರಿಕದ ಮ್ಯಾನ್‌ಹಟ್ಟನ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ಜಾನ್ ಕೀನಾನ್ ಅವರು, ಯೂನಿಯನ್ ಕಾರ್ಬೈಡ್ ಪ್ರಕರಣದ ಬಗ್ಗೆ ಮಧ್ಯಸ್ಥಿಕೆ ವಹಿಸಬೇಕು ಎಂಬ ಕೋರಿಕೆ ಪ್ರಯೋಜನವಿಲ್ಲದ್ದು ಎಂದು ತಿಳಿಸಿದ್ದಾರೆ.
1984ರಲ್ಲಿ ಸಂಭವಿಸಿದ ಭೋಪಾಲ್ ಅನಿಲ ಸೋರಿಕೆ ಪ್ರಪಂಚದ ಅತ್ಯಂತ ದೊಡ್ಡ ಕೈಗಾರಿಕಾ ದುರಂತ ಎಂದೇ ಕರೆಯಲಾಗಿದೆ. ಸಾವಿರಾರು ಜನರು ಬಲಿಯಾಗಿದ್ದಲ್ಲದೆ, ಇಂದಿಗೂ ಹುಟ್ಟುವ ಮಕ್ಕಳು ಅಂಗವಿಕಲತೆ, ಕ್ಯಾನ್ಸರ್ ಸೇರಿದಂತೆ ಹಲವು ವ್ಯಾಧಿಗಳಿಗೆ ತುತ್ತಾಗುತ್ತಿದ್ದಾರೆ.
ಅನಿಲ ದುರಂತದ ಬಳಿಕ ಸಂತ್ರಸ್ಥರಿಗಾಗಿ ಸುಮಾರು 470ಮಿಲಿಯನ್ ಡಾಲರ್‌ನಷ್ಟು ಪರಿಹಾರವನ್ನು ಯೂನಿಯನ್ ಕಾರ್ಬೈಡ್ ಕಂಪೆನಿ ಭಾರತ ಸರ್ಕಾರಕ್ಕೆ ಪಾವತಿಸಿತ್ತು. |