ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಸತ್ಯಂ ಹಗರಣ-ಐಟಿ ಕ್ಷೇತ್ರಕ್ಕೆ ಬಾಧಕವಿಲ್ಲ: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಹಗರಣ-ಐಟಿ ಕ್ಷೇತ್ರಕ್ಕೆ ಬಾಧಕವಿಲ್ಲ: ಪ್ರಣಬ್
ಸತ್ಯಂ ಹಗರಣ ಭಾರತದ ಐಟಿ ಉದ್ಯಮಗಳನ್ನು ಬಾಧಿಸುವುದಿಲ್ಲ ಎಂದು ಹೇಳಿದ ಸರ್ಕಾರ ಪ್ರಸ್ತುತ ಹಗರಣದ ತಿರುಳನ್ನು ಪತ್ತೆ ಹಚ್ಚಲು ಸರ್ಕಾರ ತನ್ನ ಕೈಲಾದ ಪ್ರಯತ್ನವನ್ನು ಮಾಡುತ್ತಿದೆ ಎಂದು ಹೇಳಿದೆ.

ಸತ್ಯಂ ಹಗರಣದ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗಗೊಂಡಿಲ್ಲ, ಆದರೆ ಇದನ್ನು ಬಗೆಹರಿಸುವಲ್ಲಿ ಸರ್ಕಾರ ಅತ್ಯಾವಶ್ಯಕವಾದ ತನಿಖೆಗಳನ್ನು ನಡೆಸುವುದು ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿಯವರು ಎಫ್‌ಐಸಿಸಿಯ ವಾರ್ಷಿಕ ಸಭೆಯಲ್ಲಿ ಮಾತನಾಡುತ್ತ ಹೇಳಿದರು.

ಈ ಬಗ್ಗೆ ಸರ್ಕಾರ ತನಿಖೆ ನಡೆಸುತ್ತಿದೆ ಹಾಗೂ ಸಾವಿರದಷ್ಟು ಉದ್ಯೋಗಿಗಳ ಭವಿಷ್ಯ ಹಾಗೂ ಗ್ರಾಹಕರ ವಿಶ್ವಾಸವನ್ನು ಹಿಂಪಡೆಯುವಲ್ಲಿ ಸರ್ಕಾರ ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ ಎಂದರು.

ಸತ್ಯಂನ ಹೆಸರನ್ನು ಉಲ್ಲೇಖಿಸದ ಪ್ರಣಬ್ ಇಂತಹ ಹಗರಣಗಳಿಂದಾಗಿ ಭಾರತದ ಐಟಿ ಉದ್ಯಮವು ಕುಂಠಿತವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅಭಿವೃದ್ದಿಶೀಲ ದೇಶಗಳೊಂದಿಗೆ ಭಾರತವು ಕೂಡ ಉತ್ತಮ ಆರ್ಥಿಕ ಸುಸ್ಥಿತಿಯೊಂದಿಗೆ ಎದ್ದು ನಿಂತಿದೆ ಎಂದು ಹೇಳಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ: ರಾಷ್ಟ್ರಪತಿ
ನಿತಾರಿ ಹತ್ಯಾಕಾಂಡ: ಪಂಧೇರ್-ಕೋಲಿ ತಪ್ಪಿತಸ್ಥರು
ಭೋಪಾಲ್ ದುರಂತ: ಮಧ್ಯಸ್ಥಿಕೆಗೆ ಯುಎಸ್ ಕೋರ್ಟ್ ನಕಾರ
ಲೋಕಸಭೆ ಅಧಿವೇಶನ ಆರಂಭ
ರಾಗಿಂಗ್ ನಡೆಸಿದರೆ ಕ್ರಿಮಿನಲ್ ಮೊಕದ್ದಮೆ: ಸುಪ್ರೀಂ
ಪಾಕ್ ಕಸಬ್ ಪ್ರಕರಣ; ಮುಂದುವರಿದ ಗೊಂದಲ