ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಭಾರೀ ನಿರೀಕ್ಷೆಗಳೊಂದಿಗೆ ಮಧ್ಯಂತರ ರೈಲ್ವೇ ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರೀ ನಿರೀಕ್ಷೆಗಳೊಂದಿಗೆ ಮಧ್ಯಂತರ ರೈಲ್ವೇ ಬಜೆಟ್
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆ ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಯುಪಿಎ ಬಲ ವೃದ್ಧಿಸುವ ಯತ್ನವಾಗಿ ಇಂದು ಮಧ್ಯಂತರ ರೈಲ್ವೇ ಬಜೆಟ್ ಮಂಡಿಸಲಿದ್ದಾರೆ. ಕಳೆದೈದು ವರ್ಷಗಳಿಂದ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಮಾಡದೆ ಸಹಿಸಿಕೊಂಡಿದ್ದ ಲಾಲೂ ಇದೀಗ ತೈಲ ಬೆಲೆಗಳ ಕುಸಿತದಿಂದಾಗಿ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲಗಳನ್ನು ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಲಾಲೂ ಪ್ರಸಾದ್ ಯಾದವ್ ಕಳೆದ ಐದು ವರ್ಷಗಳಿಂದ ಜನಪ್ರಿಯ ಬಜೆಟ್ ಮಂಡಿಸಿದ್ದು, ಇದೀಗ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತ್ತೊಮ್ಮೆ ಜನರನ್ನು ತಮ್ಮತ್ತ ಸೆಳೆಯಲಿದ್ದಾರೆ. ಜತೆಗೆ ಜಾಗತಿಕ ತೈಲ ಬೆಲೆ ಕುಸಿತದ ಲಾಭವೂ ಬೆನ್ನ ಹಿಂದಿರುವುದರಿಂದ ಅದರ ಲಾಭವನ್ನು ಪ್ರಯಾಣಿಕರಿಗೆ ಒದಗಿಸಬಹುದು.

ಮ‌ೂಲಗಳ ಪ್ರಕಾರ ಪ್ರಯಾಣ ದರ ಹಾಗೂ ಕೆಲವು ವಲಯಗಳಲ್ಲಿ ಸರಕು ಸಾಗಣೆ ವೆಚ್ಚ ಕಡಿತ ಮಾಡುವ ಸಾಧ್ಯತೆಗಳಿವೆ. ಹೆಚ್ಚಿನ ಜನಶತಾಬ್ದಿ, ಗರೀಬ್ ರಥಗಗಳನ್ನು ಪರಿಚಯಿಸಬಹುದು.

ಸರಕು ಸಾಗಣಿಕೆ ದರವನ್ನು ಇಳಿಸುವ ಮ‌ೂಲಕ ಭಾರತ ಕಾರ್ಪೊರೇಟ್ ವಲಯಕ್ಕೆ ಸಮಾಧಾನ ತರುವ ಯತ್ನ ಮತ್ತು ಹೊಸ ರೈಲುಗಳನ್ನು ಪರಿಚಯಿಸುವ ಸಾಧ್ಯತೆಯಿರುವುದರಿಂದ ಬಂಡಿ ತಯಾರಕರಿಗೆ ಹೊಸ ಗುತ್ತಿಗೆಗಳು ಸಿಗಬಹುದು.

ಪ್ರಯಾಣ ದರ ಕಡಿತದಿಂದ ರೈಲ್ವೇ ಇಲಾಖೆ ಪ್ರತಿ ಪ್ರಯಾಣಿಕರ ಕಿಲೋಮೀಟರ್ ಪ್ರಯಾಣದಲ್ಲಿ 13 ಪೈಸೆಗಳ ನಷ್ಟ ಅನುಭವಿಸುತ್ತಿದೆ. ಆದರೆ ಸರಕು ಸಾಗಣೆ ವಲಯದಲ್ಲಿ ಡಿಸೆಂಬರ್‌ವರೆಗೆ 450 ಕೋಟಿ ರೂಪಾಯಿ ಲಾಭದ ಗುರಿ ಇಡಲಾಗಿದೆ.

ಜಾಗತಿಕ ಬೆಲೆ ಏರಿಕೆಯ ಹೊರತಾಗಿಯ‌ೂ ಕಳೆದ ವರ್ಷದ ಜನವರಿ ತಿಂಗಳಿಗಿಂತ 2.9ರಷ್ಟು ಸರಕು ಸಾಗಣೆಯನ್ನು ಈ ವರ್ಷದ ಅದೇ ತಿಂಗಳಲ್ಲಿ ನಡೆಸಲಾಗಿದೆ. ಈ ವರ್ಷ 74.55 ಮಿಲಿಯನ್ ಟನ್‌ ಸರಕು ರೈಲಿನ ಮ‌ೂಲಕ ಸಾಗಾಟ ಮಾಡಲಾಗಿದೆ. ಅಲ್ಲದೇ ಯುಪಿಎ ಆಡಳಿತಾವಧಿಯಲ್ಲಿ ರೈಲ್ವೇ ಇಲಾಖೆ ತನ್ನ ಒಟ್ಟು ಸಂಚಾರದಲ್ಲಿ 14 ಪ್ರತಿಶತ ಬೆಳವಣಿಗೆ ದಾಖಲಿಸಿದೆ.

ಇದು ಲೇಖಾನುದಾನ ಪ್ರಕ್ರಿಯೆಯಾಗಿದ್ದು, ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ತೈಲ ಬೆಲೆ ಇಳಿಕೆಯ ಲಾಭವನ್ನು ಪ್ರಯಾಣಿಕರೊಂದಿಗೆ ಹಂಚಿಕೊಳ್ಳಲು ಬಯಸಿದ್ದಾರೆ ಎಂದು ಮ‌ೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಂಜು: ವಿಮಾನಯಾನ ವಿಳಂಬ
ಪ್ರೇಮಿಗಳ ದಿನದಂದು ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಪ್ರತಿಭಟನೆ: ಸಿನ್ನಾ-ಮುಂಡಾಗೆ ಲಾಠಿ ಹೊಡೆತ !
ಸತ್ಯಂ ಹಗರಣ-ಐಟಿ ಕ್ಷೇತ್ರಕ್ಕೆ ಬಾಧಕವಿಲ್ಲ: ಪ್ರಣಬ್
ಉಗ್ರರ ವಿರುದ್ಧ ಕ್ರಮ ಕೈಗೊಳ್ಳಿ: ರಾಷ್ಟ್ರಪತಿ
ನಿತಾರಿ ಹತ್ಯಾಕಾಂಡ: ಪಂಧೇರ್-ಕೋಲಿ ತಪ್ಪಿತಸ್ಥರು