ಮುಂಬೈಯ ಬಾಂದ್ರಾದಲ್ಲಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರ ಮನೆ ಮೇಲೆ ಶುಕ್ರವಾರ ಬೆಳಿಗ್ಗಿನ ಜಾವ ಮೂರು ಬೈಕ್‌ಗಳಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಬಾಟಲಿ ಎಸೆದು ದಾಳಿ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಮೋಟಾರ್ ಸೈಕಲ್‌ನಲ್ಲಿ ಆಗಮಿಸಿದ್ದ ಆಗಂತುಕರು ಬಾಟಲಿಯೊಳಗೆ ಸೀಮೆಎಣ್ಣೆ ಸುರಿದು ಶಾರುಕ್ ಮನೆಯತ್ತ ಎಸೆದು ಪರಾರಿಯಾಗಿದ್ದರು. ಆದರೆ ದುಷ್ಕರ್ಮಿಗಳನ್ನು ಶಾರುಕ್ ಮನ್ನಾಟ್ ಮನೆಯ ಸೆಕ್ಯುರಿಟಿ ಗಾರ್ಡ್ ಸೆರೆಹಿಡಿಯಲು ಬೆನ್ನಟ್ಟಿದ್ದರಾದರು ಅದು ಪ್ರಯೋಜನವಾಗಿಲ್ಲ ಎಂದು ಪೊಲೀಸ್ ಡಿಸಿಪಿ ನಿಕೇತ್ ಕೌಶಿಕ್ ಪಿಟಿಐಗೆ ಹೇಳಿದ್ದಾರೆ.ಈ ಘಟನೆ ನಡೆಯುವ ಸಂದರ್ಭದಲ್ಲಿ ಶಾರುಕ್ ಮನೆಯಲ್ಲಿ ಇರಲಿಲ್ಲವಾಗಿತ್ತು, ಇದರಲ್ಲಿ ಯಾರೊಬ್ಬರು ಗಾಯಗೊಂಡಿಲ್ಲ ಎಂದು ತಿಳಿಸಿದ ಅವರು, ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ. |