ಗುರುವಾರದಿಂದ ಆರಂಭಗೊಂಡ ಸಂಸತ್ ಅಧಿವೇಶನದಲ್ಲಿ ಶುಕ್ರವಾರ ರೈಲ್ವೆ ಸಚಿವ ಲಾಲುಪ್ರಸಾದ್ ಯಾದವ್ ಸತತ 6ನೇ ಬಾರಿಯೂ ಜನಪರ (ಆಮ್ ಆದ್ಮಿ)ವಾದ ಮಧ್ಯಂತರ ರೈಲ್ವೆ ಬಜೆಟ್ ಮಂಡಿಸಿದ್ದಾರೆ.ರೈಲ್ವೆ ಪ್ರಯಾಣ ದರದಲ್ಲಿ ಹವಾನಿಯಂತ್ರಿತ ಸೇರಿದಂತೆ ಜನರಲ್ ಪ್ರಯಾಣದರದಲ್ಲಿ ಶೇ.2ರಷ್ಟು ಇಳಿಕೆ ಘೋಷಿಸಿದ ಲಾಲೂಪ್ರಸಾದ್ ಪ್ರಸಕ್ತ ಸಾಲಿನಲ್ಲಿ ಕರ್ನಾಟಕಕ್ಕೆ ಮೂರು ನೂತನ ರೈಲು ಮಂಜೂರು ಮಾಡಿದ್ದಾರೆ. ಮೈಸೂರು-ಯಶವಂತಪುರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ನಿಜಾಮುದ್ದೀನ್ ನೂತನ ರೈಲನ್ನು ಲಾಲೂ ಕರ್ನಾಟಕಕ್ಕೆ ದಯಪಾಲಿಸುವ ಮೂಲಕ ಕರ್ನಾಟಕದ ಮುಂಗೈ ಬೆಲ್ಲ ಸವರುವ ಮೂಲಕ ಸಾಕಷ್ಟು ನಿರಾಸೆ ಮೂಡಿಸಿದ್ದಾರೆ.ಕಳೆದ ಐದು ವರ್ಷಗಳಲ್ಲಿ ರೈಲ್ವೆ ಇಲಾಖೆ 90ಸಾವಿರ ಕೋಟಿ ಆದಾಯ ಗಳಿಸಿದ್ದು, ಜನಸಾಮಾನ್ಯರ ಮೇಲೆ ಹೊರೆ ಹೇರದೆ ಇಲಾಖೆ ಲಾಭ ಗಳಿಸಿದೆ. ಅಲ್ಲದೇ ಜನಸಾಮಾನ್ಯರಿಗೆ ಹೊರೆಯಾಗದಂತೆ ಈ ಬಾರಿಯೂ ಯುಪಿಎ ಸರ್ಕಾರ ಜನಪರವಾದ ರೈಲ್ವೆ ಬಜೆಟ್ ಮಂಡಿಸುತ್ತಿರುವಾದಾಗಿ ಅವರು ನುಡಿದರು. ಮಧ್ಯಂತರ ರೈಲ್ವೆ ಬಜೆಟ್ ಮುಖ್ಯಾಂಶ:ರೈಲ್ವೆ ದುರ್ಘಟನೆಗಳ ಸಂಖ್ಯೆ ಇಳಿಮುಖರೈಲ್ವೆ ವಿಚಾರಣೆಗೆ 4ಕಾಲ್ ಸೆಂಟರ್‌ಗಳ ಸ್ಥಾಪನೆಪ್ರಯಾಣಿಕರ ಸಂಚಾರದಲ್ಲಿ ಶೇ.14ರಷ್ಟು ಹೆಚ್ಚಳ2009-10 ರಲ್ಲಿ 10,576 ಕೋಟಿ ಲಾಭದ ನಿರೀಕ್ಷೆರೈಲಿನಲ್ಲಿ ಡಬ್ಬಲ್ ಡೆಕ್ಕರ್ ಸರಕು ಸಾಗಾಣೆ ವ್ಯವಸ್ಥೆಗೆ ಕ್ರಮರೈಲ್ವೆ ಉದ್ಯೋಗಿಗಳಿಗೆ 6ನೇ ವೇತನ ಆಯೋಗದ ಶಿಫಾರಸು ಜಾರಿದೆಹಲಿ-ಅಮೃತ್‌ಸರ್-ಹೌರಾ-ಅಹಮದಾಬಾದ್-ಪುಣೆ-ಚೆನ್ನೈ-ಎರ್ನಾಕುಲಂ ನಡುವೆ ಬುಲೆಟ್ ಟ್ರೈನ್ ವ್ಯವಸ್ಥೆಮುಂದಿನ 5ವರ್ಷಗಳಲ್ಲಿ 2.3ಲಕ್ಷ ಹೂಡಿಕೆಲೂಧಿಯಾನದಿಂದ ಕೋಲ್ಕತಾದವರೆಗೆ ಪೂರ್ವ ಸರಕು ಸಾಗಾಣಿಕೆ ಕಾರಿಡಾರ್ಭಗಲ್ಪುರ್,ಥಾಣೆಯಲ್ಲಿ ನೂತನ ರೈಲ್ವೆ ವಿಭಾಗಅಜ್ಮೀರ್-ಭಗಲ್ಪುರ್ ನಡುವೆ ನೂತನ ಗರೀಬ್ ರಥ್ ರೈಲು |